ಬೇಸಿಗೆ ಆರಂಭದಲ್ಲೇ ಚರ್ಮದ ಕೊರತೆ ಎದುರಾಗಿರೋದು ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ.ಬೆಂಕಿ ಅವಘಡಗಳು, ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ನೀಡಲು ಚರ್ಮದ ಕೊರತೆ ಇದೆ ಅಂತಾ ಸ್ಕಿನ್ ಬ್ಯಾಂಕ್ ವೈದ್ಯರ ತಂಡ ಕಳವಳ ವ್ಯಕ್ತಪಡಿಸಿದೆ. ಚರ್ಮದಾನಿಗಳು ಇಳಿಕೆಯಾಗ್ತಿರೋದು, ಸಂಗ್ರಹಿಸಿದ ಚರ್ಮವನ್ನ ಬಳಕೆಗೆ ಯೋಗ್ಯ ಮಾಡುವ ಪ್ರಕ್ರಿಯೆಗೆ ಸಮಯ ಹಿಡಿಯುತ್ತಿರುವುದು ಚರ್ಮದ ಕೊರತೆಗೆ ಕಾರಣವಾಗಿದೆ.ಇನ್ನು ವ್ಯಕ್ತಿ ಸತ್ತ ಬಳಿಕ 6 ಗಂಟೆಯ ಒಳಗೆ ಚರ್ಮ ಸಂಗ್ರಹ ಮಾಡಬೇಕು.ಈ ವೇಳೆ ಹಲವರಿಗೆ ಚರ್ಮದಾನದ ಬಗ್ಗೆ ಅರಿವು ಇಲ್ಲದೇ ಇರೋದು ಕೂಡ ಚರ್ಮದ ಅಭಾವಕ್ಕೆ ಕಾರಣವಾಗಿದೆ.ಚರ್ಮದಾನದ ಬಗ್ಗೆ ಅರಿವು ಇಲ್ಲದೇ ಇರೋದರಿಂದ ದಾನಿಗಳ ಸಂಖ್ಯೆ ಕೂಡ ಇಳಿಮುಖವಾಗ್ತಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದಾರೆ.