ಸೆ.29ರಂದು ಕರ್ನಾಟಕ ಬಂದ್’

ಸೋಮವಾರ, 25 ಸೆಪ್ಟಂಬರ್ 2023 (18:05 IST)
ಮಹದಾಯಿ, ಕಾವೇರಿ ವಿಚಾರವಾಗಿ ಹೋರಾಟ ಮಾಡಿದ್ದೇವೆ. ಆದರೆ ಇವರು ಏಕಾಏಕಿ ಬಂದ್‌ಗೆ ಕರೆ ನೀಡಿದ್ದಾರೆ ಅಂತಾ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಒಂದೇ ವಾರದಲ್ಲಿ ಎರಡು ಬಂದ್ ಮಾಡುವುದು ಸರಿಯಲ್ಲ. ಈ ಹಿಂದೆ ಎಲ್ಲಾ ಕರ್ನಾಟಕ ಬಂದ್‌ಗೆ ವಾಟಾಳ್ ನಾಗರಾಜ್ ಅವರು ಕರೆ ನೀಡುತ್ತಿದ್ದರು. ಅನೇಕ ಬಾರಿ ಜೈಲಿಗೆ ಹೋಗಿ ಹೋರಾಟ ಮಾಡಿದ್ದಾರೆ. ಆದರೆ ಇವರು ನಾಳೆಗೆ ಬೆಂಗಳೂರು ಬಂದ್‌ಗೆ ಕರೆ ನೀಡಿರುವುದು. ನಮ್ಮ ಕಾವೇರಿ ಹೋರಾಟ ಹಾಗೂ ರೈತಪರ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಇದು ಕೇವಲ ಬೆಂಗಳೂರು ಬಂದ್‌ಗೆ ಸೀಮಿತವಾಗಬಾರದು. ಹೀಗಾಗಿ 29ನೇ ತಾರೀಕು ಇಡೀ ಕರ್ನಾಟಕ ಬಂದ್ ಮಾಡ್ತೀವಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ