ಕಾಂಗ್ರೆಸ್ ಪಟ್ಟಿ ಬಿಡುಗಡೆ ಇಂದು: ಸಚಿವರ ಮಕ್ಕಳಿಗೆ ಮಣೆ!

Sampriya

ಬುಧವಾರ, 20 ಮಾರ್ಚ್ 2024 (17:50 IST)
Photo Courtesy Facebook
ಬೆಂಗಳೂರು:  ಇಂದು ಸಂಜೆ ವೇಳೆ ಕರ್ನಾಟಕ ಕಾಂಗ್ರೆಸ್‌ನ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಇಗಾಗಲೇ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದೆ ಎಂದು ತಿಳಿದುಬಂದಿದೆ.

ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಐವರುಸಚಿವರ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ. ಸಚಿವ ಶಿವಾನಂದ ಪಾಟೀಲ್ ಪುತ್ರಿ, ಸಚಿವೆ ಲಕ್ಷ್ಮಿ ನಿಬ್ಬಾಳ್ಕರ ಪುತ್ರ, ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ, ಸತೀಶ್ ಜಾರಕಿಹೋಳಿ  ಮಗಳು, ಮಲ್ಲಿಕಾರ್ಜುನ ಖರ್ಗೆ, ಸಚಿವ ಈಶ್ವರ ಖಂಡ್ರೆ ಮಗ ಸೇರಿದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಯಿದೆ.

ಸಂಭಾವ್ಯ ಪಟ್ಟಿ ಹೀಗಿದೆ: ಚಿತ್ರದುರ್ಗಾದಿಂದ ಚಂದ್ರಪ್ಪ, ಬೆಳಗಾವಿಯಿಂದ ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿಯಿಂದ ಪ್ರಿಯಾಂಕ ಜಾರಕಿಹೋಳಿ, ಬಾಗಲಕೋಟೆಯಿಂದ ಸಂಯುಕ್ತಾ ಪಾಟೀಲ್, ಕೊಪ್ಪಳದಿಂದ ರಾಜಶೇಖರ್‌, ಕಲಬುರ್ಗಿ ಕ್ಷೇತ್ರದಿಂದ ರಾಧಕೃಷ್ಣ ದೊಡ್ಡಮಣಿಗೆ,  ದಕ್ಷಿಣ ಕನ್ನಡ ಜಿಲ್ಲೆಯಿಂದ ಪದ್ಮರಾಜ್ ರಾಮಯ್ಯ, ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಜಯಪ್ರಕಾಶ್ ಹೆಗ್ಡೆ, ಬೆಂಗಳೂರು ದಕ್ಷಿಣದಿಂದ ಸೌಮ್ಯ ರೆಡ್ಡಿ, ಬೆಂಗಳೂರು ಸೆಂಟರ್‌ನಿಂದ ಮನ್ಸೂರ್ ಅಲಿಖಾನ್, ಮೈಸೂರು ಕೊಡಗು ಕ್ಷೇತ್ರದಿಂದ ಲಕ್ಷ್ಮಣ್ , ರಾಯಚೂರು ಕ್ಷೇತ್ರದಿಂದ ಕುಮಾರ್ ನಾಯಕ, ದಾವಣಗೆರೆಯಿಂದೆ ಪ್ರಭಾ ಮಲ್ಲಿಕಾರ್ಜುನ, ಬೆಂಗಳೂರು ಉತ್ತರದಿಂದ ರಾಜೀವ ಗೌಡವರ ಹೆಸರು ಅಂತಿಮವಾಗಿದೆ ಎಂದು ಹೇಳಲಾಗಿದೆ.

ಇನ್ನೂ ನಾಲ್ಕು ಕ್ಷೇತ್ರಗಳು ಬಾಕಿ ಉಳಿಯುವ ಸಾಧತತರೆ. ಕೋಲಾರ, ಬಳ್ಳಾರಿ, ಚಿಕ್ಕಬಳ್ಳಾಪು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಆಗದೆ ಉಳಿಯುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ