ಡಿಸಿಎಂ ಫೈಟ್ ಸೃಷ್ಟಿಸಿ ಡಿಕೆ ಶಿವಕುಮಾರ್ ಕಿತ್ತು ಹಾಕಲು ಕಾಂಗ್ರೆಸ್ ನೊಳಗೇ ಮಸಲತ್ತು

Krishnaveni K

ಬುಧವಾರ, 26 ಜೂನ್ 2024 (10:49 IST)
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ನಿರೀಕ್ಷಿಸಿದಷ್ಟು ಸ್ಥಾನ ಪಡೆಯಲು ವಿಫಲವಾದ ಮೇಲೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಬೇಕು ಎಂಬ ಕೂಗು ಕೇಳಿಬಂದಿತ್ತು. ಆದರೆ ಇದುವರೆಗೆ ಅದಕ್ಕೆ ಹೈಕಮಾಂಡ್ ನಿಂದ ಒಪ್ಪಿಗೆ ಸಿಕ್ಕಿರಲಿಲ್ಲ.

ಇದೀಗ ರಾಜ್ಯ ಸರ್ಕಾರದಲ್ಲಿ ಡಿಸಿಎಂ ಫೈಟ್ ಜೋರಾಗಿದೆ. ಒಂದಕ್ಕಿಂತ ಹೆಚ್ಚು ಸಮುದಾಯವಾರು ನಾಯಕರಿಗೆ ಡಿಸಿಎಂ ಪಟ್ಟ ನೀಡಬೇಕು ಎಂದು ಆಗ್ರಹಗಳು ಜೋರಾಗಿವೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಈ ನಿರ್ಧಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದಿದ್ದಾರೆ. ಆದರೆ ಇದೆಲ್ಲದರ ಹಿಂದೆ ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆಯುವ ಪ್ಲ್ಯಾನ್ ಇದೆ ಎನ್ನಲಾಗುತ್ತಿದೆ.

ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ಗೆ ಕಡಿವಾಣ ಹಾಕಲು ಮತ್ತಷ್ಟು ಡಿಸಿಎಂ ಹುದ್ದೆ ಸೃಷ್ಟಿಸಲು ಒಳಗೊಳಗೇ ಕಾಂಗ್ರೆಸ್ ನಾಯಕರಿಂದ ಮಸಲತ್ತು ನಡೆಯುತ್ತಿದೆ. ಒಂದು ವೇಳೆ ಡಿಸಿಎಂ ಹುದ್ದೆ ಸೃಷ್ಟಿಸಲು ನಿರಾಕರಿಸಿದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆಯಿಡಲು ಯೋಜನೆ ರೂಪಿಸಲಾಗಿದೆ.

ಈ ಮೂಲಕ ಡಿಕೆ ಶಿವಕುಮಾರ್ ಪ್ರಭಾವ ತಗ್ಗಿಸಲು ಪ್ಲ್ಯಾನ್ ಮಾಡಲಾಗಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಬಳಿಕ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ಡಿಕೆಶಿಯನ್ನು ಕಟ್ಟಿ ಹಾಕಲು ಪಕ್ಷದೊಳಗೇ ಅವರ ವಿರೋಧಿ ಬಣ ಹೀಗೊಂದು ಪ್ಲ್ಯಾನ್ ಮಾಡಿದೆಯಂತೆ .ಅದಕ್ಕಾಗಿಯೇ ಈಗ ದಿಡೀರ್ ಆಗಿ ಡಿಸಿಎಂ ಪಟ್ಟದ ಫೈಟ್ ಶುರುವಾಗಿದೆ ಎಂಬ ಗುಸು ಗುಸು ಹರಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ