ಮಹಿಳೆಯರಿಗೆ ಫ್ರೀ ಬಸ್ ಎಂದು ಪುರುಷರಿಗೆ ಜೇಬಿಗೇ ಯಾಕೆ ಕೈ ಹಾಕ್ತೀರಿ

Krishnaveni K

ಗುರುವಾರ, 9 ಜನವರಿ 2025 (08:53 IST)
ಬೆಂಗಳೂರು: ಮಹಿಳೆಯರಿಗೆ ಶಕ್ತಿ ಯೋಜನೆಯಿಂದಾಗಿ ಉಚಿತ ಬಸ್ ಪ್ರಯಾಣ ಲಾಭ ಮಾಡುತ್ತಿದೆ ಎಂದು ಹೇಳಿಕೊಂಡಿರುವ ಸಿಎಂ ಸಿದ್ದರಾಮಯ್ಯನವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಶಕ್ತಿ ಯೋಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದರು. ಭವ್ಯ ಎಂಬ ಮಹಿಳೆಯರ ವಿಡಿಯೋ ಪ್ರಕಟಿಸಿ ಶಕ್ತಿ ಯೋಜನೆ ಮಹಿಳೆಯರಿಗೆ ಎಷ್ಟು ಪ್ರಯೋಜನವಾಗುತ್ತಿದೆ ನೋಡಿ ಎಂದು ಬರೆದುಕೊಂಡಿದ್ದಾರೆ.

ಆದರೆ ಸಿದ್ದರಾಮಯ್ಯ ಈ ಪೋಸ್ಟ್ ಗೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದು ಮಹಿಳೆಯರಿಗೆ ಫ್ರೀ ಬಸ್ ಎಂದು ಪುರುಷರ ಜೇಬಿಗೆ ಯಾಕೆ ಕತ್ತರಿ ಹಾಕುತ್ತೀರಿ? ನಿಮ್ಮ ಈ ಯೋಜನೆಯಿಂದ ಬಸ್ ನಲ್ಲಿ ವಿದ್ಯಾರ್ಥಿಗಳು, ಕಚೇರಿಗೆ ಹೋಗುವವರಿಗೆ ಆರಾಮವಾಗಿ ಓಡಾಡಲೂ ಸಾಧ್ಯವಾಗುತ್ತಿಲ್ಲ, ಯಾವತ್ತೂ ಬಸ್ ನಲ್ಲಿ ಅಷ್ಟು ರಶ್ ಇರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೆ ಕೆಲವರು ಎಲ್ಲಾ ಮಹಿಳೆಯರಿಗೂ ಫ್ರೀ ಕೊಡುವ ಬದಲು ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ನೀಡುವ ಮೂಲಕ ಯಾರು ಅರ್ಹರಿದ್ದಾರೋ ಅವರಿಗೆ ಮಾತ್ರ ಸಿಗುವಂತೆ ಮಾಡಿ ಎಂದು ಸಲಹೆ ಕೊಟ್ಟವರೂ ಇದ್ದಾರೆ. ಒಂದು ವೇಳೆ ಶಕ್ತಿ ಯೋಜನೆಯಿಂದ ಲಾಭವಾಗುತ್ತಿದ್ದರೆ ಆ ಲಾಭಾಂಶ ಎಲ್ಲಿ ಹೋಗುತ್ತಿದೆ ಎಂಬುದನ್ನೂ ತೋರಿಸಿ ಎಂದು ಕೆಲವರು ಸವಾಲು ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ