ಕರ್ನಾಟಕಕ್ಕೆ ಸಿಕ್ಕಿತು ಹೊಸ ಧ್ವಜ! ಹೇಗಿದೆ ಗೊತ್ತಾ?

ಗುರುವಾರ, 8 ಮಾರ್ಚ್ 2018 (12:25 IST)
ಬೆಂಗಳೂರು: ಕೊನೆಗೂ ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಸಿಕ್ಕಿದೆ. ಇದುವರೆಗೆ ಇದ್ದ ಧ್ವಜಕ್ಕಿಂತ ಕೊಂಚ ಬದಲಾವಣೆಯೊಂದಿಗೆ ಹೊಸ ಧ್ವಜ ವಿನ್ಯಾಸಗೊಳಿಸಲಾಗಿದೆ.

ಕೆಂಪು, ಹಳದಿ ಬಣ್ಣದ ಜತೆಗೆ ಮಧ್ಯದಲ್ಲಿ ಬಿಳಿ ಬಣ್ಣವೂ ಸೇರಿಕೊಂಡಿದೆ. ಮಧ್ಯದಲ್ಲಿ ರಾಜ್ಯದ ಲಾಂಛನ ವಿನ್ಯಾಸ ಮಾಡಲಾಗಿದೆ.

ಹಲವರ ಒತ್ತಾಸೆಯ ಮೇರೆಗೆ ಧ್ವಜ ವಿನ್ಯಾಸ ಮಾಡಲಾಗಿದೆ. ಆದರೆ ಇದನ್ನು ಅಧಿಕೃತವಾಗಿ ಘೋಷಿಸುವ ಕೆಲಸ ಕೇಂದ್ರ ಸರ್ಕಾರದ್ದು. ರಾಜ್ಯ ಸರ್ಕಾರ ಧ್ವಜ ಘೋಷಣೆ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಧ್ವಜ ಬಿಡುಗಡೆ ಮಾಡಿದ ಬಳಿಕ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ