ಕರ್ನಾಟಕ ಸರಕಾರ ಒಂದು ಭ್ರಷ್ಟ ಸರಕಾರ: ತಿವಾರಿ ಕುಟುಂಬ ಆರೋಪ

ಮಂಗಳವಾರ, 6 ಜೂನ್ 2017 (17:09 IST)
ಕರ್ನಾಟಕ ಸರಕಾರ ಭ್ರಷ್ಟ ಸರಕಾರವಾಗಿದೆ ಎಂದು ಹಿರಿಯ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಪೋಷಕರು ಆರೋಪಿಸಿದ್ದಾರೆ.
 
ನಗರದ ಯಲಹಂಕದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೋಷಕರು, ಎಸ್‌‍ಐಟಿಯಿಂದ ಸರಿಯಾದ ತನಿಖೆ ನಡೆಯುತ್ತಿಲ್ಲ. ಎಸ್‌ಐಟಿ ತನಿಖೆಯ ಮೇಲೆ ನಂಬಿಕೆಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ರಾಜ್ಯ ಸರಕಾರ ನಾಲ್ಕು ತಿಂಗಳುಗಳಿಂದ ಮಗನಿಗೆ ಸಂಬಳ ಕೊಟ್ಟಿರಲಿಲ್ಲ. ಕರ್ನಾಟಕ ಸರಕಾರ ಒಂದು ಭ್ರಷ್ಟ ಸರಕಾರವಾಗಿದೆ. ಆಹಾರ ಇಲಾಖೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿತ್ತು. ನನ್ನ ಮಗ ಭ್ರಷ್ಟಾಚಾರ ಹೊರಹಾಕಲು ಹೊರಟಿದ್ದರಿಂದ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದರು. 
 
ನಮ್ಮ ಮಗನ ಸಾವಿನ ನಂತರ ಆತನ ರೂಮ್‌ನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ನಂತರ ನನ್ನ ಮಗನ ಕೋಣೆಯನ್ನು ಯಾವುದೇ ಪರಿಶೀಲನೆ ನಡೆಸದೇ ಕ್ಲೀನ್ ಮಾಡಲಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ಯುಪಿ ಐಎಎಸ್ ಕೇಡರ್ ಅಧಿಕಾರಿ ನಾರಾಯಣ್ ಪ್ರಭು ಮೇಲೆ ನಮಗೆ ಸಂಶಯವಿದೆ. ನಮ್ಮ ಮಗನನ್ನು ವಿಷ ಹಾಕಿ ಸಾಯಿಸಲಾಗಿದೆ. ಎಸ್‌ಐಟಿಯವರು ನಮಗೆ ಸಂಪರ್ಕಿಸುತ್ತಿಲ್ಲ. ಎಸ್‌ಐಟಿಯಿಂದ ನ್ಯಾಯ ದೊರೆಯಲ್ಲ. ಸಿಬಿಐ ತನಿಖೆ ನಡೆಸಿದಲ್ಲಿ ಮಾತ್ರ ಸತ್ಯ ಸಂಗತಿ ಹೊರಬರುತ್ತದೆ ಎಂದು ಒತ್ತಾಯಿಸಿದ್ದಾರೆ.
 
ಮಗ ಅನುರಾಗ್ ಹತ್ಯೆಯಾದ ದಿನ ಐದು ಜನರೊಂದಿಗೆ ಊಟಕ್ಕೆ ತೆರಳಿದ್ದ. ಐದು ಜನರು ಸೇರಿಯೇ ಹತ್ಯೆ ಮಾಡಿರಬಹುದು ಎನ್ನುವ ಸಂಶಯವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
 
ವೋಟ್ ಬೇಕಾದಾಗ ಎಲ್ಲರೂ ಮನೆ ಬಳಿ ಬರುತ್ತಾರೆ. ನನ್ನ ಮಗ ಸತ್ತಾಗ ಯಾರೂ ಬರಲಿಲ್ಲ. ಪ್ರಾಮಾಣಿಕ ಅಧಿಕಾರಿ ಸಾವನ್ನಪ್ಪಿದ್ದರೂ ಯಾರೂ ಸಾಂತ್ವನ ಹೇಳಲು ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 
 
ನನ್ನ ಮಗ ಅನುರಾಗ್ ತಿವಾರಿಗೆ ನ್ಯಾಯ ಸಿಗುವ ತನಕ ಹೋರಾಟ ನಿಲ್ಲಿಸಲ್ಲ ಎಂದು ಅನುರಾಗ್ ತಂದೆ ಬಿ.ಎನ್.ತಿವಾರಿ, ತಾಯಿ ಸುಶೀಲ್ ತಿವಾರಿ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ