ಕರ್ನಾಟಕದಲ್ಲಿ ಇಂದು ಕೊರೋನಾ ಸೋಂಕಿತ ಉದ್ಯೋಗಿಗಳಿಗೆ 7 ದಿನ ರಜೆ

ಬುಧವಾರ, 27 ಡಿಸೆಂಬರ್ 2023 (10:18 IST)
ಬೆಂಗಳೂರು: ಕೊವಿಡ್ ಕೇಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಇಂದು ಕೊವಿಡ್ ಸೋಂಕಿತು ಉದ್ಯೋಗಿಗಳಿಗೆ 7 ದಿನ ಮನೆಯಲ್ಲೇ ಇರಲು ಸೂಚನೆ ನೀಡಲಾಗಿದೆ.

ಕೊವಿಡ್ ಸೋಂಕಿತ ಉದ್ಯೋಗಿಗಳಿಗೆ ಸರ್ಕಾರಿ ಅಥವಾ ಖಾಸಗಿ ಕಂಪನಿಗಳು 7 ದಿನ ಕಡ್ಡಾಯ ರಜೆ ನೀಡಬೇಕು. ಈ ಸಮಯದಲ್ಲಿ ಅವರು ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಎಂದು ಸೂಚನೆ ನೀಡಲಾಗಿದೆ.

ಕೊರೋನಾ ರೂಪಾಂತರಿ ಜೆ.ಎನ್.1 ಬೇಗನೇ ಹರಡುತ್ತಿರುವುದರಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಕ್ಕಳಲ್ಲೂ ಸೋಂಕು ಬೇಗನೇ ಹರಡುವ ಸಾಧ್ಯತೆಯಿದ್ದು, ಸೋಂಕು ತಗುಲಿದ ಶಂಕೆಯಿದ್ದಲ್ಲಿ ಶಾಲೆಗೆ ಕಳುಹಿಸಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಮಂಗಳವಾರ ಹೊಸದಾಗಿ 74 ಮಂದಿಗೆ ಸೋಂಕು ತಗುಲಿದ ವರದಿಯಾಗಿದೆ. 44 ಮಂದಿ ಕೊರೋನಾದಿಂದ ಗುಣಮುಖರಾಗುತ್ತಿದ್ಆರೆ. ದಕ್ಷಿಣ ಕನ್ನಡ ಮತ್ತು ಮೈಸೂರಿನಲ್ಲಿ ಇಬ್ಬರು ಮೃತಪಟ್ಟಿರುವ ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ