ಕಳೆದ 24 ಘಂಟೆಯಲ್ಲಿ ರಾಜ್ಯದಲ್ಲಿ ಹೊಸದಾಗಿ 24 ಕೊರೋನಾ ಕೇಸ್ಗಳು ಪತ್ತೆಯಾಗಿವೆ.. ಬೆಂಗಳೂರಿನಲ್ಲಿ 23 ಜನರಲ್ಲಿ ಕೊರೋನಾ ಕಾಣಿಸಿಕೊಂಡಿದೆ.. ದಕ್ಷಿಣ ಕನ್ನಡದಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ.. 24 ಗಂಟೆಯಲ್ಲಿ 2 ಸಾವಿರದ 263 ಜನರಿಗೆ ಕೊರೋನಾ ಟೆಸ್ಟ್ ಮಾಡಲಾಗಿದೆ.. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 105ಕ್ಕೆ ಏರಿಕೆಯಾಗಿದೆ.. 11 ಜನ ಕೊರೋನಾದಿಂದ ಗುಣಮುಖರಾಗಿದ್ದು, ಸಾವು ವರದಿಯಾಗಿಲ್ಲ.
ಸೋಂಕಿತರ ಪೈಕಿ 9 ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.. ಇಂದು ಇಬ್ಬರು ಕೊರೋನಾ ಸೋಂಕಿತರು ಐಸಿಯುಗೆ ದಾಖಲಾಗಿದ್ದಾರೆ.. ರಾಜ್ಯದ ಕೊರೋನಾ ಪಾಸಿಟಿವಿಟಿ ರೇಟ್ 1.06 ಪರ್ಸೆಂಟ್ ಕ್ಕೆ ಏರಿಕೆಯಾಗಿದೆ.. ಹೋಮ್ ಐಸೊಲೇಷನ್ನಲ್ಲಿ 85 ಸೋಂಕಿತರಿದ್ದು, 20 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.