ಇಡೀ ಕರ್ನಾಟಕವೇ ಲಾಕ್ ಡೌನ್: ಸಚಿವರಿಂದ ಸುಳಿವು

ಶುಕ್ರವಾರ, 7 ಮೇ 2021 (09:56 IST)
ಬೆಂಗಳೂರು: ಕೊರೋನಾ ನಿಯಂತ್ರಿಸಲು ಎರಡು ವಾರಗಳ ಜನತಾ ಕರ್ಫ್ಯೂ ವಿಧಿಸಿಯೂ ಪ್ರಯೋಜನವಾಗದ ಹಿನ್ನಲೆಯಲ್ಲಿ ಇನ್ನು ಸಂಪೂರ್ಣ ಕರ್ನಾಟಕ ಲಾಕ್ ಡೌನ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.


ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಅವರೇ ಸುಳಿವು ನೀಡಿದ್ದಾರೆ. ಬರೀ ಜನತಾ ಕರ್ಫ್ಯೂನಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಸಂಪೂರ್ಣ ಲಾಕ್ ಡೌನ್ ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಮೊದಲು ರಾಜ್ಯ ಸರ್ಕಾರ ವಿಧಿಸಿದ್ದ ಜನತಾ ಕರ್ಫ್ಯೂ ಅವಧಿ ಸೋಮವಾರ ಮುಕ್ತಾಯವಾಗಲಿದೆ. ಇದಾದ ಬಳಿಕ ಮತ್ತೆ 10 ದಿನಗಳ ಕಾಲ ಕಠಿಣ ಲಾಕ್ ಡೌನ್ ವಿಧಿಸುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ