ತಾಯಿಯ ಬಳಿಕ ಕೊರೋನಾಗೆ ಸಹೋದರಿಯನ್ನೂ ಕಳೆದುಕೊಂಡ ವೇದಾ ಕೃಷ್ಣಮೂರ್ತಿ
ವೇದಾ ತಾಯಿ, ತಂದೆ, ಅತ್ತಿಗೆ ಸೇರಿದಂತೆ ಇಡೀ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿತ್ತು. ಈ ಸಂಬಂಧ ಅವರು ಕಡೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಿಪರ್ಯಾಸವೆಂದರೆ ಎರಡೇ ವಾರಗಳ ಅಂತರದಲ್ಲಿ ಇಬ್ಬರು ಕುಟುಂಬ ಸದಸ್ಯರನ್ನು ಅವರು ಕಳೆದುಕೊಂಡಿದ್ದಾರೆ.