ಅರುಣ್‌ ಯೋಗಿರಾಜ್‌ ಸೇರಿ 69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

sampriya

ಗುರುವಾರ, 31 ಅಕ್ಟೋಬರ್ 2024 (13:39 IST)
photo credit X
ಬೆಂಗಳೂರು: 2024 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರದಿಂದ 69 ಮಂದಿ ಸಾಧಕರು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಐದು ಲಕ್ಷ ನಗದು ಬಹುಮಾನ ಹಾಗೂ 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿರುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಬರೆದುಕೊಂಡು ಪ್ರಶಸ್ತಿ ವಿಜೇತರಿಗೆ ಶುಭಕೋರಿದರು. ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಅಭಿನಂದನೆಗಳು. ಕಲೆ, ಸಾಹಿತ್ಯ, ಸಂಗೀತ, ಜಾನಪದ, ಸಮಾಜಸೇವೆ, ಕೃಷಿ, ಪರಿಸರ, ಶಿಕ್ಷಣ, ಕ್ರೀಡೆ, ಮಾಧ್ಯಮ, ವಿಜ್ಞಾನ ತಂತ್ರಜ್ಞಾನ ಹೀಗೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಎಲ್ಲಾ ಗಣ್ಯರು ಈ ಪ್ರಶಸ್ತಿಯ ಗೌರವವನ್ನು‌ ಹೆಚ್ಚಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, " ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಪ್ರತಿಯೊಂದು ಜಿಲ್ಲೆಗೂ ಪ್ರಾತಿನಿದ್ಯ ನೀಡಲಾಗಿದೆ ಹಾಗೂ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಳ್ಳಲಾಗಿದೆ.

ಈ ವರ್ಷ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ವರ್ಷ ಆಗಿರುವುದರಿಂದ ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಸುವರ್ಣ ಸಂಭ್ರಮ -50 ರ ಸುವರ್ಣ ಮಹೋತ್ಸವ ಎಂಬ ವಿಶೇಷ ಪ್ರಶಸ್ತಿಯನ್ನು 50 ಸಾಧಕ ಮಹಿಳೆಯರಿಗೆ ಮತ್ತು 50 ಪುರುಷರಿಗೆ ನೀಡಲಾಗುತ್ತಿದೆ. ಇದರಿಂದ 69 + 100 ಒಟ್ಟು 169 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಾನಪದ

ಶಿಲ್ಪಕಲೆ

ಕ್ಷೇತ್ರ - ಚಲನಚಿತ್ರ /ಕಿರುತೆರೆ
ಕ್ಷೇತ್ರ –ಸಂಗೀತ
ಕ್ಷೇತ್ರ-ನೃತ್ಯ
ಕ್ಷೇತ್ರ- ಆಡಳಿತ
ಕ್ಷೇತ್ರ-ವೈದ್ಯಕೀಯ
ಕ್ಷೇತ್ರ- ಸಮಾಜಸೇವೆ
ಕ್ಷೇತ್ರ- ಸಂಕೀರ್ಣ
ಕ್ಷೇತ್ರ- ಹೊರದೇಶ-ಹೊರನಾಡು
ಪರಿಸರ
ಕೃಷಿ
ಮಾಧ್ಯಮ
ವಿಜ್ಞಾನ ತಂತ್ರಜ್ಞಾನ
ಸಹಕಾರ
ಯಕ್ಷಗಾನ
ಬಯಲಾಟ
ರಂಗಭೂಮಿ
ಸಾಹಿತ್ಯ
ಶಿಕ್ಷಣ
ಕ್ರೀಡೆ
ನ್ಯಾಯಾಂಗ
ಚಿತ್ರಕತೆ
ಕರಕುಶಲ
ಚಂದ್ರಶೇಖರ ಸಿರಿವಂತೆ - ಶಿವಮೊಗ್ಗ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ