ಮುಡಾ ಪ್ರಕರಣ: ವಿಚಾರಣೆಗೆ ಸಹಕರಿಸದ ಮಾಜಿ ಆಯುಕ್ತ ನಟೇಶ್ ಇಡಿ ವಶಕ್ಕೆ
ಈ ಹಿನ್ನೆಲೆಯಲ್ಲಿ ನಟೇಶ್ ಮನೆ ಮೇಲೆ ಸೋಮವಾರ ದಾಳಿ ಮಾಡಿ ಇ.ಡಿ ವಿಚಾರಣೆಗೆ ಒಳಪಡಿಸಿತ್ತು. ಆದರೆ, ತನಿಖೆಗೆ ನಟೇಶ್ ಅವರು ಸಹಕರಿಸಿಲ್ಲ ಎನ್ನಲಾಗಿದೆ.
ಈ ಪ್ರಕರಣದಲ್ಲಿ ತನ್ನದೇನು ತಪ್ಪಿಲ್ಲ. ಸರ್ಕಾರದ ಆದೇಶದಂತೆ ಕೆಲಸ ಮಾಡಿದ್ದೇನೆ. ನನಗೆ ಕಾರ್ತಿಕ್ ಲೇಔಟ್ ನಿರ್ಮಾಣ ಸಂದರ್ಭದಲ್ಲಿ ಆದ ಬೆಳವಣಿಗೆ ಗೊತ್ತಿಲ್ಲ. ಬಿಲ್ಡರ್ ಮಂಜುನಾಥ್ ಕಾನೂನಾತ್ಮಕವಾಗಿ ಲೇಔಟ್ ನಿರ್ಮಾಣ ಮಾಡಿದ್ದಾರೆ. 50:50 ಅನುಪಾತದಲ್ಲಿ ಯಾವುದೇ ಅವ್ಯವಹಾರವನ್ನೂ ಮಾಡಿಲ್ಲ. ಸರ್ಕಾರದ ನಡಾವಳಿಯಲ್ಲಿಯೇ ಇದೆ ಶೇ. 50:50 ಅನುಪಾತದಲ್ಲಿ ನೀಡಲಾಗಿದೆ. 2022 ಮತ್ತು 2023 ರಲ್ಲಿ ನಡಾವಳಿ ಬದಲಾವಣೆ ಆಗಿದೆ ಎಂದು ತಿಳಿಸಿದ್ದಾರೆ.