Karnataka Weather: ಮಳೆ ಬೆನ್ನಲ್ಲೇ ಇಂದಿನಿಂದ ರಾಜ್ಯದ ಜನತೆಗೆ ಶಾಕಿಂಗ್ ಹವಾಮಾನ

Krishnaveni K

ಗುರುವಾರ, 13 ಮಾರ್ಚ್ 2025 (09:38 IST)
ಬೆಂಗಳೂರು: ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ನಿನ್ನೆ ಮತ್ತು ಮೊನ್ನೆ ಮಳೆಯಾಗಿತ್ತು. ಇದೀಗ ಮಳೆಯ ಬೆನ್ನಲ್ಲೇ ರಾಜ್ಯದ ಜನತೆಗೆ ಇಂದಿನಿಂದ ಶಾಕಿಂಗ್ ಹವಾಮಾನ ಕಾದಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊನ್ನೆ ಸಂಜೆ ಸಣ್ಣ ಮಳೆಯಾಗಿತ್ತು. ಪರಿಣಾಮ ನಿನ್ನೆಯೂ ಕೆಲವೆಡೆ ಮೋಡ ಕವಿದ ವಾತಾವರಣ ಮತ್ತು ತಂಪು ಗಾಳಿ ಕಂಡುಬಂದಿತ್ತು. ಇದರಿಂದಾಗಿ ಬಿಸಿಲಿನ ತಾಪ ಕೊಂಚ ಮಟ್ಟಿಗೆ ತಗ್ಗಿತ್ತು.

ನಿನ್ನೆ ಚಾಮರಾಜನಗರ, ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ, ಮೈಸೂರಿನ ಕೆಲವೆಡೆ ಮಳೆಯಾಗಿತ್ತು. ಪರಿಣಾಮ ಬೆಂಗಳೂರಿನಲ್ಲೂ ಸಂಜೆ ತಂಪು ವಾತಾವರಣವಿತ್ತು. ಆದರೆ ರಾಜ್ಯದ ಉಳಿದ ಕಡೆಗಳಲ್ಲಿ ಬಿರು ಬಿಸಿಲಿನ ವಾತಾವರಣವಿತ್ತು.

ಆದರೆ ಇಂದಿಗೆ ಮಳೆಯ ಮುನ್ಸೂಚನೆಯಿಲ್ಲ. ಬದಲಾಗಿ ಇಂದಿನಿಂದ ತಾಪಮಾನ ವಿಪರೀತ ಏರಿಕೆಯಾಗಲಿದೆ. ಇಂದು ರಾಜ್ಯಾದ್ಯಂತ ಸರಾಸರಿ ಗರಿಷ್ಠ ತಾಪಮಾನ 33 ಡಿಗ್ರಿಯಷ್ಟಿರಲಿದೆ. ಇದು ಇನ್ನಷ್ಟು ಏರಿಕೆಯಾಗಲಿದೆ. ಇನ್ನು, ದಕ್ಷಿಣ ಕನ್ನಡದಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿಯಷ್ಟಾಗಲಿದೆ. ಬಹುತೇಕ ಮಾರ್ಚ್ ನಲ್ಲಿ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ