ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಸಂಜೆ ಭಾರೀ ಮಳೆಯಾಗಿದ್ದು ಮಳೆಯ ವಿಡಿಯೋ ಇಲ್ಲಿದೆ. ಇಂದಿನ ಹವಾಮಾನ ಹೇಗಿದೆ ಎಂದು ಇಲ್ಲಿದೆ ವಿವರ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ನಿನ್ನೆ ಭಾರೀ ಮಳೆಯಾಗಿದೆ. ಗುಡುಗು ಸಹಿತ ಮಳೆಯಾಗಿದ್ದು, ಕೆಲವೆಡೆ ಆಲಿಕಲ್ಲು ಮಳೆಯಾದ ವರದಿಯೂ ಆಗಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ನಿನ್ನೆ ಆಲಿಕಲ್ಲು ಮಳೆಯಾದ ವರದಿಯಾಗಿದೆ.
ಉಳಿದಂತೆ ಉಡುಪಿ, ಮಂಗಳೂರು, ಬಂಟ್ವಾಳ, ಪುತ್ತೂರು, ಸುಬ್ರಹ್ಮಣ್ಯ, ಕಡಬ, ಸುಳ್ಯ ಮುಂತಾದೆಡೆ ಭಾರೀ ಮಳೆಯಾಗಿದೆ. ಈ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಬಿಸಿಲಿನ ವಾತಾವರಣವಿತ್ತು.
ಇಂದೂ ಈ ಪ್ರದೇಶಗಳಿಗೆ ಹವಾಮಾನ ವರದಿ ಪ್ರಕಾರ ಮೋಡಕವಿದ ವಾತಾವರಣವಿರಲಿದೆ. ಉಳಿದಂತೆ ಗರಿಷ್ಠ ತಾಪಮಾನ 38 ಡಿಗ್ರಿಯಷ್ಟು ಇರಲಿದೆ ಎಂದು ತಿಳಿದು ಬಂದಿದೆ.