ಕರ್ನಾಟಕ ಹವಾಮಾನ: ಈ ದಿನದ ವಾತಾವರಣದ ಬದಲಾವಣೆ ಗಮನಿಸಿ
ಕಳೆದ ಒಂದು ವಾರದಿಂದ ಕರ್ನಾಟಕದಲ್ಲಿ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಹಗಲು ವಿಪರೀತ ಬಿಸಿಲಿನ ಝಳದಿಂದಾಗಿ ಜನರು ಹೊರಗೆ ಕಾಲಿಡಲೂ ಹಿಂದೇಟು ಹಾಕುವಂತಾಗಿದೆ. ಇದು ಬೇಸಿಗೆಯ ಆರಂಭಿಕ ಸೂಚನೆಯಾಗಿದೆ.
ನಿನ್ನೆ 30 ಡಿಗ್ರಿಯವರೆಗೆ ತಲುಪಿದ್ದ ಗರಿಷ್ಠ ಉಷ್ಣಾಂಶ ಇಂದೂ ಕೂಡಾ ಹೆಚ್ಚು ಕಡಿಮೆ ಅದೇ ಆಸುಪಾಸಿನಲ್ಲಿದೆ. ಕನಿಷ್ಠ ತಾಪಮಾನ ರಾಜ್ಯಾದ್ಯಂತ ಈಗ 18 ಡಿಗ್ರಿಯವರೆಗೂ ತಲುಪಿದೆ. ರಾತ್ರಿ ಮಾತ್ರ ಕೊಂಚ ತಂಪಾದ ವಾತಾವರಣವಿರುತ್ತದೆ.
ರಾಜ್ಯದಲ್ಲಿ ಈಗ ಒಣ ಹವೆ ಮುಂದುವರಿದಿದೆ. ಇಂದೂ ಬಿಸಿಲಿನ ಝಳ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಆದರೆ ಕರ್ನಾಟಕದ ಉತ್ತರ ಜಿಲ್ಲೆಗಳಲ್ಲಿ ಚಳಿಯ ವಾತಾವರಣ ಮುಂದುವರಿದಿದೆ. ಇನ್ನಷ್ಟು ದಿನ ಇದೇ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ.