ಬೆಂಗಳೂರು: ಕಳೆದ ಕೆಲವು ದಿನಗಳಿಂದ ವಿಪರೀತ ಚಳಿಯಿದ್ದ ಕರ್ನಾಟಕದಲ್ಲಿ ಇಂದಿನಿಂದ ಹವಾಮಾನ ವಿಚಾರದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಕರ್ನಾಟಕದ ಲೇಟೆಸ್ಟ ಹವಾಮಾನ ವರದಿ ಇಲ್ಲಿದೆ ನೋಡಿ.
ಕರ್ನಾಟಕದಲ್ಲಿ ಕಳೆದ ಎರಡು ವಾರಗಳಿಂದ ವಿಪರೀತ ಚಳಿಯಿತ್ತು. ಜೊತೆಗೆ ಮಳೆಯ ಸಾಧ್ಯತೆಯ ಬಗ್ಗೆಯೂ ವರದಿಯಾಗಿತ್ತು. ಆದರೆ ಈ ವಾರದ ಆರಂಭದಿಂದಲೇ ವಾತಾವರಣದಲ್ಲಿ ಮಹತ್ವದ ಬದಲಾವಣೆಯಾಗಿದೆ. ಒಣ ಹವೆ ಮುಂದುವರಿದರೂ ತಾಪಮಾನದಲ್ಲಿ ಏರಿಕೆಯಾಗಿದೆ.
ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ ಗರಿಷ್ಠ 26 ಡಿಗ್ರಿಯವರೆಗೆ ತಾಪಮಾನ ಏರಿಕೆಯಾಗುತ್ತಿದೆ. ಆದರೆ ಇದೀಗ ಬೆಂಗಳೂರಿನಲ್ಲಿ 29-30 ಡಿಗ್ರಿಯವರೆಗೆ ತಾಪಮಾನ ಏರಿಕೆಯಾಗಿದೆ. ಅದರಲ್ಲೂ ಹಗಲು ಹೊತ್ತು ಹೊರಗೆ ಕಾಲಿಡಲಾಗದಷ್ಟು ಬಿರು ಬಿಸಿಲು ಶುರುವಾಗಿದೆ.
ಹೀಗಾಗಿ ಈ ಬಾರಿ ಬೇಸಿಗೆ ಮತ್ತಷ್ಟು ಬಿರುಸಾಗುವುದು ಗ್ಯಾರಂಟಿಯಾಗಿದೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಒಣಹವೆ ಮುಂದುವರಿದಿದೆ. ಉತ್ತರದ ಜಿಲ್ಲೆಗಳಲ್ಲೂ ಈ ಬಾರಿ ತಾಪಮಾನ ಗರಿಷ್ಠ ಮಟ್ಟಕ್ಕೇರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.