ಬೆಂಗಳೂರು: ಕರ್ನಾಟಕದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದು ಈ ದಿನ ಮಳೆ ಸಾಧ್ಯತೆಯಿದೆಯೇ ಹವಾಮಾನ ಹೇಗಿರಲಿದೆ ಎಂಬ ಲೇಟೆಸ್ಟ್ ಹವಾಮಾನ ವರದಿ ಇಲ್ಲಿದೆ ನೋಡಿ. ಸೈಕ್ಲೋನ್ ಇಫೆಕ್ಟ್ ನಿಂದ ರಾಜ್ಯದ ಈ ಭಾಗದಲ್ಲಿ ಮಳೆಯಾಗಲಿದೆ.
ರಾಜ್ಯದಲ್ಲಿ ಈಗ ಬಿಸಿಲಿನ ಝಳ ಹೆಚ್ಚಾಗಿದ್ದು ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಕಳೆದ ವಾರವಿಡೀ ಗರಿಷ್ಠ ತಾಪಮಾನ 32-25 ಡಿಗ್ರಿಯಷ್ಟಿತ್ತು. ಆದರೆ ದಕ್ಷಿಣ ಕನ್ನಡದ ಕೆಲವು ಕಡೆ ಮಾತ್ರ ಆಗಾಗ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಬಂಗಾಳ ಕೊಲ್ಲಿಯಲ್ಲಿ ಚಂಡುಮಾರುತ ರೂಪುಗೊಳ್ಳುತ್ತಿದ್ದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ಉಳಿದ ಭಾಗಗಳಲ್ಲಿ ಈ ವಾರವೂ ಹವಾಮಾನ ಕಳೆದ ವಾರದಂತೆಯೇ ಮುಂದುವರಿಯಲಿದೆ. ರಾಜ್ಯದ ಬಹುತೇಕ ಒಣ ಹವೆ, ಹಗಲು ವಿಪರೀತ ಬಿಸಿಲಿನ ವಾತಾವರಣ ಕಂಡುಬರುವುದು. ಹವಾಮಾನ ವರದಿ ಪ್ರಕಾರ ಈ ವಾರ ಮಳೆ ಸಾಧ್ಯತೆ ಕಡಿಮೆ.
ಈ ವಾರ ತಾಪಮಾನ 35 ಡಿಗ್ರಿಯವರೆಗೂ ಏರಿಕೆಯಾಗಲಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಬಿಸಿಲಿನ ವಾತಾವರಣವಿರಲಿದೆ. ಹಾಗಿದ್ದರೂ ಬುಧವಾರದಿಂದ ಕೆಲವು ಕಡೆ ಸಣ್ಣ ಪ್ರಮಾಣದಲ್ಲಿ ಮೋಡ ಕವಿದ ವಾತಾವರಣ ಕಂಡುಬಂದೀತು. ಅದು ಬಿಟ್ಟರೆ ತಾಪಮಾನ ಇನ್ನಷ್ಟು ಏರಿಕೆಯಾಗಲಿದೆ.