ಬೆಂಗಳೂರು: ಈ ವರ್ಷ ಹವಾಮಾನದಲ್ಲಿ ಎಲ್ಲವೂ ವಿಪರೀತ ಎನಿಸುವ ಮಟ್ಟಿಗಿದೆ. ಬೇಸಿಗೆಯೇ ಈ ಪರಿಯಾದರೆ ಮಳೆಗಾಲ ಹೇಗಿರಲಿದೆ ಇಲ್ಲಿದೆ ವಿವರ.
ಈ ವರ್ಷ ಬೇಸಿಗೆಯಲ್ಲಿ ತಾಪಮಾನ ದಾಖಲೆಯ ಮಟ್ಟಕ್ಕೆ ಏರಿಕೆಯಾಗಲಿದೆ ಎಂದು ಈಗಾಗಲೇ ಹವಾಮಾನ ವರದಿ ಹೇಳಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ 40 ಡಿಗ್ರಿ ಸೆಲ್ಶಿಯಸ್ ದಾಟುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ.
ಬೇಸಿಗೆಯೇ ಕಡುವಾಗಿದ್ದರೆ ಮಳೆಗಾಲ ಹೇಗಿರಲಿದೆ ಎಂಬುದು ಎಲ್ಲರ ನಿರೀಕ್ಷೆಯಾಗಿದೆ. ಕಳೆದ ಬಾರಿ ಉತ್ತಮ ಮಳೆಯಾಗಿತ್ತು. ಹೀಗಾಗಿ ಈ ಬಾರಿಯೂ ಮುಂಗಾರು ಚೆನ್ನಾಗಿ ಆಗಬಹುದು ಎಂಬುದು ರೈತರ ನಿರೀಕ್ಷೆಯಾಗಿದೆ.
ಹವಾಮಾನ ವರದಿಗಳ ಪ್ರಕಾರ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ಮುಂಗಾರು ಮಾತ್ರವಲ್ಲ, ಮುಂಗಾರು ಪೂರ್ವ ಮಳೆಯೂ ಎಂದಿಗಿಂತ ಹೆಚ್ಚು ಇರಲಿದೆ ಎಂದು ತಿಳಿದುಬಂದಿದೆ. ಮಾರ್ಚ್ ನಿಂದ ತಾಪಮಾನ ವಿಪರೀತ ಎನಿಸುವಷ್ಟು ಏರಿಕೆಯಾಗಲಿದ್ದು ಬಳಿಕ ಮೇನಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ನೀರಾವರಿ ಮತ್ತು ಕೃಷಿ ಚಟುವಟಿಕೆಗಳಿಗೆ ಈ ವರ್ಷ ಯಾವುದೇ ತೊಂದರೆಯಾಗದು ಎನ್ನಲಾಗಿದೆ.