Karnataka Weather: ಸತತ ಸೆಖೆ, ಬಿಸಿಲಿನಿಂದ ತತ್ತರಿಸಿದ್ದ ರಾಜ್ಯದ ಜನರಿಗೆ ಗುಡ್ ನ್ಯೂಸ್

Krishnaveni K

ಬುಧವಾರ, 7 ಮೇ 2025 (09:00 IST)
ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಬೇಸಿಗೆ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿತ್ತು. ಸತತ ಸೆಖೆ, ಬಿಸಿಲಿನಿಂದ ತತ್ತರಿಸಿದ್ದ ಜನಕ್ಕೆ ಈಗ ಗುಡ್ ನ್ಯೂಸ್ ಸಿಗಲಿದೆ.

ರಾಜ್ಯದಲ್ಲಿ ಕಳೆದ ವಾರ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿತ್ತು. ಬಿರು ಬೇಸಿಗೆಯ ನಡುವೆ ವರುಣನ ಆಗಮನ ಕೊಂಚ ತಂಪು ನೀಡಿತ್ತು. ಆದರೆ ಈ ವಾರದ ಆರಂಭದಿಂದಲೇ ಮಳೆ ಕಡಿಮೆಯಾಗಿದ್ದು ಬಿಸಿಲಿನ ಅಬ್ಬರ ಕಂಡುಬರುತ್ತಿದೆ.

ಆದರೆ ಇದೀಗ ಹವಾಮಾನ ವರದಿಗಳು ಗುಡ್ ನ್ಯೂಸ್ ನೀಡಿದೆ. ಗುರುವಾರದಿಂದ ರಾಜ್ಯದ ಬಹುತೇಕ ಕಡೆಗಳಲ್ಲಿ ಮತ್ತೆ ಮಳೆಯಾಗಲಿದೆ ಎಂದು ಲೇಟೆಸ್ಟ್ ಹವಾಮಾನ ವರದಿಗಳು ಹೇಳುತ್ತಿವೆ. ನಿನ್ನೆ ಬೆಂಗಳೂರು, ದಕ್ಷಿಣ ಕನ್ನಡದ ಕೆಲವು ಭಾಗಗಳು ಸೇರಿದಂತೆ ಕೆಲವೇ ಭಾಗಗಳಲ್ಲಿ ಸಣ್ಣ ಮಟ್ಟಿನ ಮಳೆಯಾಗಿತ್ತು.

ಇಂದೂ ಕೂಡಾ ಮೋಡ ಕವಿದ ವಾತಾವರಣ ಮತ್ತು ಕೆಲವೆಡೆ ಮಾತ್ರ ಹನಿ ಮಳೆಯಾಗಲಿದೆ. ಉಳಿದಂತೆ ಸೆಖೆಯ ವಾತಾವರಣವಿರಲಿದೆ. ಆದರೆ ನಾಳೆಯಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಇಂದು ರಾಜ್ಯದ ಗರಿಷ್ಠ ತಾಪಮಾನ 31 ರಿಂದ 32 ಡಿಗ್ರಿಯಷ್ಟಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ