Karnataka Weather: ಮುಂಗಾರು ಮಳೆಗಾಗಿ ಕಾಯುತ್ತಿದ್ದವರಿಗೆ ಗುಡ್ ನ್ಯೂಸ್
ಈ ಬಾರಿ ಬೇಸಿಗೆ ಮಳೆ ಧಾರಾಕಾರವಾಗಿ ಸುರಿಯಲಿದ್ದು, ಮುಂಗಾರು ಮಳೆಯೂ ಬೇಗನೇ ಬರಲಿದೆ ಎಂದು ಈಗಾಗಲೇ ಹವಾಮಾನ ವರದಿಗಳು ಹೇಳಿದ್ದವು. ಮೇ ಕೊನೆಯ ವಾರದಲ್ಲಿ ಮುಂಗಾರು ಪ್ರವೇಶವಾಗಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ ಲೇಟೆಸ್ಟ್ ವರದಿ ಪ್ರಕಾರ ಮುಂದಿನ ವಾರದ ಅಂತ್ಯಕ್ಕೇ ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ಸತತ ಬಿಸಿಲಿನಿಂದ ತತ್ತರಿಸಿದ್ದ ಜನಕ್ಕೆ ಇದು ನಿಜಕ್ಕೂ ಸಂತಸದ ವಿಚಾರವಾಗಿದೆ.
ಈ ಬಾರಿ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ಹೇಳಿದ್ದವು. ಜೂನ್ ನಿಂದ ಸೆಪ್ಟೆಂಬರ್ ವರೆಗೂ ಉತ್ತಮ ಮಳೆಯಾಗುವ ನಿರೀಕ್ಷೆಯಿತ್ತು. ಅದರಂತೆ ಈಗ ಬೇಗನೇ ಮುಂಗಾರು ಪ್ರವೇಶಿಸುವ ಸುದ್ದಿ ಬಂದಿದೆ.