ಬೆಂಗಳೂರು: ಇಂದಿನ ಹವಾಮಾನ ವರದಿ ಮತ್ತು ಇಂದು ದೇಶದ ಯಾವ ಭಾಗಗಳಿಗೆ ಮಳೆಯ ಸೂಚನೆಯಿದೆ ಇತ್ಯಾದಿ ಲೇಟೆಸ್ಟ್ ಹವಾಮಾನ ವರದಿ ಇಲ್ಲಿದೆ ನೋಡಿ.
ಕರ್ನಾಟಕದಲ್ಲಿ ಈಗ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಈಗಲೇ ಸುಡು ಬಿಸಲಿಗೆ ಜನರು ಕಂಗಾಲಾಗಿದ್ದಾರೆ. ಮಧ್ಯಾಹ್ನದ ವೇಳೆ ಹೊರಗೆ ಕಾಲಿಡಲೂ ಆಗದಷ್ಟು ಬಿಸಿಲಿರುತ್ತದೆ.
ರಾಜ್ಯದಲ್ಲಿ ಗರಿಷ್ಠ ತಾಪಮಾನ ಈಗಾಗಲೇ 35 ಡಿಗ್ರಿ ದಾಟಿದೆ. ಇಂದೂ ಕೂಡಾ ಬಹುತೇಕ ರಾಜ್ಯದ ಎಲ್ಲಾ ಕಡೆ ಬಿಸಿಲಿನ ಝಳ ಮುಂದುವರಿಯಲಿದೆ. ಈ ವಾರವಿಡೀ ರಾಜ್ಯದಲ್ಲಿ ಶುಷ್ಕ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ಆದರೆ ದೇಶದ ಕೆಲವು ಭಾಗಗಳಲ್ಲಿ ಇಂದಿನಿಂದ ಮಳೆಯ ಸೂಚನೆಯಿದೆ. ವಿಶೇಷವಾಗಿ ಉತ್ತರದ ರಾಜ್ಯಗಳಲ್ಲಿ ಮಳೆಯ ಸೂಚನೆಯಿದೆ. ಮಣಿಪುರ, ನಾಗಾಲ್ಯಾಂಡ್, ತ್ರಿಪುರ, ಪಶ್ಚಿಮ ಬಂಗಾಲ ಸೇರಿದಂತೆ ಹಲವೆಡೆ ಮಳೆಯಾಗುವ ಸೂಚನೆಯಿದೆ. ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಸಾಧ್ಯತೆಯಿದ್ದು ಇದು ಈ ರಾಜ್ಯಗಳಲ್ಲಿ ಮೋಡ ಕವಿದ ವಾತಾವರಣ, ಮಳೆಗೆ ಕಾರಣವಾಗಬಹುದು ಎಂದು ಹವಾಮಾನ ವರದಿಗಳು ಹೇಳಿವೆ.