ಕರ್ನಾಟಕ ಹವಾಮಾನ: ಈ ವಾರದಲ್ಲಿ ಮಳೆ ಇದೆಯೇ, ಲೇಟೆಸ್ಟ್ ವರದಿ ಇಲ್ಲಿದೆ
ಈ ನಡುವೆ ಮಳೆಯ ಸುದ್ದಿಯೊಂದು ಹರಿದಾಡುತ್ತಿದೆ. ವಾಯುಭಾರ ಕುಸಿತದಿಂದ ಈ ವಾರದಲ್ಲಿ ಮಳೆಯಾಗಲಿದೆ ಎಂಬ ಸುದ್ದಿಯಿದೆ. ಸದ್ಯದ ಹವಾಮಾನ ವರದಿ ಪ್ರಕಾರ ಈ ವಾರದ ಅಂತ್ಯಕ್ಕೆ ಸ್ವಲ್ಪ ಮೋಡ ಕವಿದ ವಾತಾವರಣವಿರಲಿದೆ. ಇದು ಮಳೆಯಾಗುವ ಸಾಧ್ಯತೆಯೂ ಇಲ್ಲದಿಲ್ಲ. ಹಾಗಿದ್ದರೂ ಬಹುತೇಕ ಬಿಸಿಲಿನ ವಾತಾವರಣ ಮುಂದುವರಿಯಲಿದೆ.
ಒಂದು ವೇಳೆ ಮಳೆಯಾದರೂ ತಾಪಮಾನದಲ್ಲಿ ಬದಲಾವಣೆಯಿರುವುದಿಲ್ಲ. ಈ ವಾರವಿಡೀ ಗರಿಷ್ಠ ತಾಪಮಾನ 32 ಡಿಗ್ರಿಯಿಂದ 35 ಡಿಗ್ರಿ ಸೆಲ್ಶಿಯಸ್ ವರೆಗೆ ತಲುಪುವ ಸಾಧ್ಯತೆಯಿದೆ. ಕನಿಷ್ಠ ತಾಪಮಾನ 19 ಡಿಗ್ರಿಯಷ್ಟಿರಲಿದೆ.