Karnataka Weather: ರಾಜ್ಯದ ಈ ಭಾಗಗಳಲ್ಲಿ ನಾಳೆಯಿಂದ ಮಳೆಯ ಮುನ್ಸೂಚನೆ

Sampriya

ಭಾನುವಾರ, 16 ಫೆಬ್ರವರಿ 2025 (15:43 IST)
ಬೆಂಗಳೂರು: ಸದ್ಯ ರಾಜ್ಯದಲ್ಲಿ ಚಳಿಯ ವಾತಾವರಣ ಕಡಿಮೆಯಾಗಿ ಬಿಸಿಲ ತಾಪ ಏರುತ್ತಿದೆ. ಬೆಳಗ್ಗೆ 10ಗಂಟೆಗೆ ಶುರುವಾಗುವ ಉರಿಬಿಸಿಲು ಸಂಜೆ 4ರ ವರೆಗೂ ಒಂದೇ ಸಮಾನವಾಗಿರುತ್ತದೆ. ಈಗಾಗಲೇ ಜನರು ಬಿಸಿಲ ತಾಪಕ್ಕೆ ಹೈರಾಣಗುತ್ತಿದ್ದಾರೆ.

ಆದರೆ ಇದೀಗ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ನಾಳೆಯಿಂದ ಕೆಲ ದಿನಗಳವರೆಗೆ ರಾಜ್ಯದ ಹಲವೆಡೆ ವರುಣನ ಆಗಮನದ ಸೂಚನೆಯಿದೆ.  ಅದರಂತೆ ಫೆಬ್ರವರಿ 17ರಿಂದ 20ರವರೆಗೆ ರಾಜ್ಯದ ಹಲವೆಡೆ ಮಳೆಯಾಗಲಿದೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಒಳನಾಡಿನಲ್ಲಿ ಚಳಿ ಮುಂದುವರೆಯಲಿದ್ದು, ಸೋಮವಾರದಿಂದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಮಳೆ ಬೀಳುವ ಮುನ್ಸೂಚನೆಯಿದೆ.

ಇನ್ನೂ ಬಳ್ಳಾರಿ, ವಿಜಯಪುರ, ಬೀದರ್, ಕಲಬುರ್ಗಿ, ಬಾಗಲಕೋಟೆ, ಧಾರವಾಡ, ಕರಾವಳಿ ಕರ್ನಾಟಕ, ಉತ್ತರ ಒಳ ಕರ್ನಾಟಕ ಮತ್ತು ದಕ್ಷಿಣ ಒಳನಾಡು ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರೆಯಲಿದೆ.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಫೆಬ್ರವರಿ 17ರಿಂದ 20ರವರೆಗೆ ಲಘು ಮಳೆಯಾಗುವ ಸೂಚನೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ