Karnataka Weather: ರಾಜ್ಯದ ಈ ಜಿಲ್ಲೆಗಳಿಗೆ ಇಂದು ಮಳೆಯ ಸೂಚನೆ

Krishnaveni K

ಮಂಗಳವಾರ, 25 ಫೆಬ್ರವರಿ 2025 (08:41 IST)
ಬೆಂಗಳೂರು: ಕರ್ನಾಟಕದಲ್ಲಿ ಬಹುತೇಕ ಕಡೆ ಬಿಸಿಲಿನ ತಾಪ ಮುಂದುವರಿದಿದ್ದರೂ ರಾಜ್ಯ ಈ ಕೆಲವು ಭಾಗಗಳಲ್ಲಿ ಹವಾಮಾನ ಇಲಾಖೆ ಮಳೆಯ ಸೂಚನೆ ನೀಡಿದೆ. ಆ ಭಾಗಗಳು ಯಾವುವು ಇಲ್ಲಿದೆ ವಿವರ.

ರಾಜ್ಯದಲ್ಲಿ ಇದೀಗ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದ್ದ ವಿಪರೀತ ಬಿಸಿಲು ಕಂಡುಬರುತ್ತಿದೆ. ಮಧ್ಯಾಹ್ನದ ವೇಳೆ ಹೊರಗಡೆ ಕಾಲಿಡಲೂ ಆಗದಷ್ಟು ಬಿಸಿಲು ಕಂಡುಬರುತ್ತಿದೆ. ತಾಪಮಾನ ಈಗ ಸರಾಸರಿ 32-35 ಡಿಗ್ರಿಯವರೆಗೂ ಇದೆ.

ಆದರೆ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುತ್ತಿದ್ದು ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುವ ಸೂಚನೆಯಿದೆ. ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಣ್ಣ ಮಟ್ಟಿಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.

ಆದರೆ ಉಳಿದಂತೆ ರಾಜ್ಯದಲ್ಲಿ ಒಣ ಹವೆ, ಬಿಸಿಲಿನ ವಾತಾವರಣ ಮುಂದುವರಿಯಲಿದೆ. ಬೆಂಗಳೂರಿನಲ್ಲೂ ಬೆಳಿಗ್ಗಿನ ಸಮಯ ಮೋಡ ಕವಿದಂತಹ ವಾತಾವರಣವಿದ್ದರೂ ಬಳಿಕ ಬಿಸಿಲಿನ ತಾಪಮಾನ ಕಂಡುಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ