Karnataka Weather: ರಾಜ್ಯದಲ್ಲಿ ಇಂದು ಈ ಎಲ್ಲಾ ಜಿಲ್ಲೆಗಳಿಗೆ ಭಾರೀ ಮಳೆ

Krishnaveni K

ಶನಿವಾರ, 26 ಏಪ್ರಿಲ್ 2025 (08:43 IST)
ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ವಿಪರೀತ ಬಿಸಿಲಿನಿಂದ ತತ್ತರಿಸಿದ್ದ ಜನಕ್ಕೆ ಇಂದು ಮಳೆಯ ಸಿಂಚನವಾಗಲಿದೆ. ಇಂದು ಈ ಕೆಲವು ಜಿಲ್ಲೆಗಳಿಗೆ ಭಾರೀ ಮಳೆಯ ಸೂಚನೆಗಳಿವೆ. ಇಂದಿನ ಹವಾಮಾನ ವರದಿ ಇಲ್ಲಿದೆ ನೋಡಿ.

ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಬೇಸಿಗೆ ಮಳೆ ಅಬ್ಬರಿಸುತ್ತಿದೆ. ವಿಶೇಷವಾಗಿ ದಕ್ಷಿಣ ಕನ್ನಡ, ಕೊಡಗು, ಉಡುಪಿ ಜಿಲ್ಲೆಗಳಲ್ಲ ನಿರಂತರವಾಗಿ ಮಳೆಯಾಗುತ್ತಲೇ ಇದೆ. ಇಂದೂ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಮಳೆಯ ಸೂಚನೆಯಿದೆ.

ಇದರ ಹೊರತಾಗಿ ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಹಾವೇರಿ, ಗದಗ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಸೂಚನೆ ನೀಡಿವೆ. ಮಳೆಯಿದ್ದರೂ ಈ ಜಿಲ್ಲೆಗಳಲ್ಲಿ ತಾಪಮಾನಕ್ಕೇನೂ ಕಡಿಮೆಯಿಲ್ಲ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ತಾಪಮಾನ ವಿಪರೀತ ಎನಿಸುವಷ್ಟಿದೆ. ಹಗಲು ಹೊತ್ತು ಹೊರಗೆ ಕಾಲಿಡಲಾಗದಂತಹ ಪರಿಸ್ಥಿತಿಯಿದೆ. ಬೆಂಗಳೂರಿನಲ್ಲಿ ಇಂದೂ ಸಂಜೆ ವೇಳೆ ಮೋಡ ಕವಿದ ವಾತಾವರಣ ಬಿಟ್ಟರೆ ಮಳೆಯಾಗುವ ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ