ಬೆಂಗಳೂರು: ವಾರಂತ್ಯಕ್ಕೆ ಕೇರಳ ಮುಂಗಾರು ಪ್ರವೇಶಿಸಿದ್ದು, ಕರ್ನಾಟಕದಲ್ಲೂ ಮಳೆಯಾಗುತ್ತಿದೆ. ಈ ವಾರ ಪೂರ್ತಿ ಹವಾಮಾನ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವಿವರ.
ಕಳೆದ ವಾರ ಬೆಂಗಳೂರಿನಲ್ಲಿ ಮಳೆಯಾಗಿತ್ತು. ಜೊತೆಗೆ ದಿನವಿಡೀ ಮೋಡ ಕವಿದ ವಾತಾವರಣ, ಗಾಳಿಯ ವಾತಾವರಣವಿದೆ. ಇದರಿಂದಾಗಿ ಬೆಂಗಳೂರು ತಂಪಾಗಿದೆ. ಈಗ ತಾಪಮಾನವೂ 24 ಡಿಗ್ರಿಗೆ ಬಂದು ತಲುಪಿದೆ.
ಹವಾಮಾನ ವರದಿ ಪ್ರಕಾರ ಈ ವಾರವೂ ರಾಜ್ಯಾದ್ಯಂತ ಮಳೆ ಮುಂದುವರಿಯಲಿದೆ. ಕೇರಳದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡದಲ್ಲೂ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಈ ವಾರವಿಡೀ ಭಾರೀ ಮಳೆ ಮುಂದುವರಿಯಲಿದೆ.
ಉಳಿದಂತೆ ಮೈಸೂರು, ಮಂಡ್ಯ, ಕೋಲಾರ, ತುಮಕೂರು, ರಾಯಚೂರು, ಬೀದರ್, ಶಿವಮೊಗ್ಗ, ಹಾವೇರಿ, ಬಾಗಲಕೋಟೆ, ಕಲಬುರಗಿ, ಬಳ್ಳಾರಿ,ಚಾಮರಾಜನಗರ, ಚಿಕ್ಕಬಳ್ಳಾಪುರ ಮೊದಲಾದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.