Karnataka Weather: ವಾಯುಭಾರ ಕುಸಿತ, ಈ ಪ್ರದೇಶಗಳಲ್ಲಿ ಮಳೆ ಸೂಚನೆ
ಸದ್ಯಕ್ಕೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಿಗ್ಗೆ ಚಳಿಯ ವಾತಾವರಣವಿದ್ದರೆ ಬೆಳಿಗ್ಗೆ 9 ಗಂಟೆ ನಂತರ ಬಿರು ಬಿಸಿಲಿನ ವಾತಾವರಣವಿರುತ್ತದೆ. ಸಂಜೆಯ ತನಕ ತಾಪಮಾನ ಗರಿಷ್ಠ 32-34 ಡಿಗ್ರಿಯವರೆಗೂ ತಲುಪುತ್ತದೆ.
ಲೇಟೆಸ್ಟ್ ಹವಾಮಾನ ವರದಿ ಪ್ರಕಾರ ಫೆಬ್ರವರಿ 20 ರಿಂದ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆಯಿದೆ. ಪರಿಣಾಮ ಕೆಲವು ಕಡೆ ತುಂತುರು ಮಳೆಯಾದರೂ ಅಚ್ಚರಿಯಿಲ್ಲ. ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಅಥವಾ ತುಂತುರು ಮಳೆಯ ಸಾಧ್ಯತೆಯಿದೆ ಎನ್ನಲಾಗಿದೆ.
ನಿನ್ನೆ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿಗಿಂತ ಹೆಚ್ಚಾಗಿದ್ದು, ಕನಿಷ್ಠ ತಾಪಮಾನವೂ 20 ಡಿಗ್ರಿಯವರೆಗೆ ತಲುಪಿತ್ತು. ಜೊತೆಗೆ ಒಣಹವೆ, ಗಾಳಿ ಮುಂದುವರಿದಿದೆ.