ಮೈಲಾರಲಿಂಗೇಶ್ವರನ ಕಾರ್ಣಿಕನ ಪ್ರಕಾರ 2025 ರಲ್ಲಿ ಮಳೆ ಹೇಗಿರಲಿದೆ

Krishnaveni K

ಗುರುವಾರ, 20 ಫೆಬ್ರವರಿ 2025 (10:58 IST)
Photo Credit: X
ಬೆಂಗಳೂರು: ಪ್ರತೀ ವರ್ಷವೂ ಉತ್ತಮ ಮಳೆ, ಬೆಳೆಯಾಗಲಿ ಎಂದೇ ಎಲ್ಲರೂ ಪ್ರಾರ್ಥಿಸುತ್ತಾರೆ. ಈ ವರ್ಷ ಮಳೆ ಹೇಗಿರಲಿದೆ ಎಂದು ಮೈಲಾರಲಿಂಗೇಶ್ವರನ ಕಾರ್ಣಿಕನ ಭವಿಷ್ಯ ನುಡಿದಿದ್ದು ಇಲ್ಲಿದೆ ವಿವರ.

ಮೈಲಾರಲಿಂಗೇಶ್ವರ ಕುರುಬ ಸಮಾಜದ ಆರಾಧ್ಯ ದೈವ. ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರನ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಅನೇಕರು ಕಾರ್ಣಿಕನ ಭವಿಷ್ಯ ಕೇಳಲೆಂದೇ ಬರುತ್ತಾರೆ.

ಈ ವರ್ಷವೂ ಮೈಲಾರಲಿಂಗೇಶ್ವರ ಭವಿಷ್ಯ ನುಡಿದಿದ್ದು, ತುಂಬಿದ ಕೊಡ ತುಳಿಕಿತಲೇ ಪರಾಕ್ ಎಂದು ಭವಿಷ್ಯ ನುಡಿದಿದ್ದ. ಅಂದರೆ ಈ ವರ್ಷ ಉತ್ತಮ ಮಳೆ, ಬೆಳೆಯಾಗಲಿದೆ ಎಂದು ಮೈಲಾರಲಿಂಗೇಶ್ವರ ಭವಿಷ್ಯ ವಾಣಿಯಾಗಿದೆ.

ಕಳೆದ ವರ್ಷವೂ ರಾಜ್ಯದಲ್ಲಿ ಉತ್ತಮ ಮಳೆಯಾಗಿತ್ತು. ಪರಿಣಾಮ ಬಹುತೇಕ ಜಲಾಶಯಗಳು ಭರ್ತಿಯಾಗಿತ್ತು. ಈ ವರ್ಷವೂ ಉತ್ತಮ ಮಳೆಯ ನಿರೀಕ್ಷೆಯಿದೆ. ಕಾರ್ಣಿಕನ ಭವಿಷ್ಯ ನೋಡಿದರೆ ಮಳೆ ಜೊತೆಗೆ ನೆರೆಯ ಅಪಾಯವೂ ಇದೆ ಎನಿಸುತ್ತಿದೆ. ಹೀಗಾಗಿ ಈ ವರ್ಷ ಬೇಸಿಗೆ ಎಷ್ಟು ಕಡುವಾಗಿರುತ್ತದೋ ಮಳೆಗಾಲವೂ ಅಷ್ಟೇ ತೀವ್ರವಾಗಿರುತ್ತದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ