Karnataka Weather: ರಾಜ್ಯದ ಯಾವ ಭಾಗಗಳಲ್ಲಿ ಇಂದು ಮಳೆ, ಎಲ್ಲಿ ಬಿಸಿಲು ಇಲ್ಲಿದೆ ವಿವರ

Krishnaveni K

ಬುಧವಾರ, 26 ಫೆಬ್ರವರಿ 2025 (08:43 IST)
ಬೆಂಗಳೂರು: ಕರ್ನಾಟಕದ ಯಾವ ಭಾಗಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ ಮತ್ತು ಯಾವ ಭಾಗಗಳಲ್ಲಿ ಇಂದು ಬಿಸಿಲಿನ ತಾಪ ಹೆಚ್ಚಾಗಲಿದೆ ಇಲ್ಲಿದೆ ಲೇಟೆಸ್ಟ್ ಹವಾಮಾನ ವರದಿ.

ಕರ್ನಾಟಕದಲ್ಲಿ ಈಗ ಒಟ್ಟಾರೆಯಾಗಿ ನೋಡುವುದಾದರೆ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಳವಾಗುತ್ತಿದೆ. ಇದರ ನಡುವೆ ಕೆಲವು ಭಾಗಗಳಲ್ಲಿ ಹನಿ ಮಳೆಯಾದ ವರದಿಯಾಗಿದೆ. ಹಾಗಿದ್ದರೂ ರಾಜ್ಯದ ಒಟ್ಟಾರೆ ತಾಪಮಾನ ಇಂದು 35-39 ಡಿಗ್ರಿಯವರೆಗೆ ತಲುಪುವ ನಿರೀಕ್ಷೆಯಿದೆ.

ಉಳಿದಂತೆ ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ. ಕರ್ನಾಟಕ ಮಾತ್ರವಲ್ಲದೆ, ದೇಶದ ಕೆಲವು ರಾಜ್ಯಗಳಲ್ಲಿ ಮಳೆಯ ಸಾಧ್ಯತೆಯಿದೆ ಎನ್ನಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ಚಂಡಮಾರುತ ರೂಪುಗೊಂಡಿದ್ದು ಪರಿಣಾಮ ಈ ವಾರಂತ್ಯಕ್ಕೆ ತಮಿಳುನಾಡು, ಹಿಮಾಚಲಪ್ರದೇಶ, ಉತ್ತರಾಖಂಡ ಮುಂತಾದೆಡೆ ಸಾಧಾರಣ ಮಳೆ ನಿರೀಕ್ಷಿಸಲಾಗಿದೆ.

 
ಫೆಬ್ರವರಿಯಲ್ಲೇ ವಿಪರೀತ ತಾಪಮಾನ ಕಂಡುಬರುತ್ತಿದ್ದು, ಜನ ಹೈರಾಣಾಗಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರೂ ಇದಕ್ಕೆ ಹೊರತಲ್ಲ. ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈಗಾಗಲೇ ತಾಪಮಾನ 39 ಡಿಗ್ರಿಯವರೆಗೆ ತಲುಪಿದೆ.

ಇದರ ನಡುವೆ ಕರಾವಳಿ ಜಿಲ್ಲೆಯಲ್ಲಿ ಅಲ್ಪ ಸ್ವಲ್ಪ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ತುಂತುರು ಮಳೆಯ ನಿರೀಕ್ಷೆಯಿದೆ. ಇನ್ನು ನಾಲ್ಕೈದು ದಿನ ದಕ್ಷಿಣ ಕನ್ನಡದಲ್ಲಿ ಮೋಡ, ಬಿಸಿಲಿನ ಕಣ್ಣಾಮುಚ್ಚಾಲೆ ಮುಂದುವರಿಯಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ