ಕರ್ನಾಟಕ ಹವಾಮಾನ: ಈ ಜಿಲ್ಲೆಗಳಿಗೆ ಶೀತ ಅಲೆ, ರೆಡ್ ಅಲರ್ಟ್ ಘೋಷಣೆ

Krishnaveni K

ಮಂಗಳವಾರ, 17 ಡಿಸೆಂಬರ್ 2024 (10:19 IST)
ಬೆಂಗಳೂರು: ಕರ್ನಾಟಕದಲ್ಲಿ ಮಳೆ ಬಳಿಕ ಈಗ ಶೀತ ಅಲೆಯ ಕಾರಣಕ್ಕೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಕೆಲವು ಜಿಲ್ಲೆಗಳಲ್ಲಿ ಶೀತ ಅಲೆ ಅಪ್ಪಳಿಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕದಾದ್ಯಂತ ಇದೀಗ ಮಳೆ ಕಡಿಮೆಯಾಗಿದ್ದು ಶೈತ್ಯ ಹವೆ ಶುರುವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ತೀವ್ರ ಚಳಿಯ ವಾತಾವರಣವಿದೆ. ಅದರಲ್ಲೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಶೀತ ಅಲೆಯ ಅಪಾಯದ ಮುನ್ಸೂಚನೆ ನೀಡಿಲಾಗಿದೆ.

ಮುಂದಿನ 24 ಗಂಟೆಗಳಲ್ಲಿ ಬೀದರ್, ವಿಜಯಪುರ, ಕಲಬುರಗಿಯಲ್ಲಿ ವಿಪರೀತ ಚಳಿಯ ವಾತಾವರಣವಿರಲಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ. ಯಾದಗಿರಿ, ರಾಯಚೂರು, ಬಾಗಲಕೋಟೆಯಲ್ಲೂ ಚಳಿಯ ವಾತಾವರಣವಿರಲಿದ್ದು ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.

ಶೀತ ಅಲೆಯ ಸಂದರ್ಭ ತಾಪಮಾನವು 6 ರಿಂದ 7 ಡಿಗ್ರಿಯವರೆಗೆ ತಲುಪಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಬೀದರ್ ನಲ್ಲಿ ಕನಿಷ್ಠ 7.5 ಡಿಗ್ರಿ ತಾಪಮಾನ ದಾಖಲಾಗಿದೆ. ಈ ಜಿಲ್ಲೆಗಳಲ್ಲಿ ಮೈ ನಡುಗುವಷ್ಟು ಚಳಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ