ಕರ್ನಾಟಕ ಹವಾಮಾನ ವರದಿ: ಹವಾಮಾನ ಇಲಾಖೆಯ ಈ ಎಚ್ಚರಿಕೆ ಗಮನಿಸಿ

Krishnaveni K

ಶುಕ್ರವಾರ, 3 ಜನವರಿ 2025 (09:57 IST)
ಬೆಂಗಳೂರು: ಕರ್ನಾಟಕದಲ್ಲಿ ಈಗ ಮಳೆ ಮಾಯವಾಗಿದ್ದು ಚಳಿಯ ವಾತಾವರಣ ಕಂಡುಬರುತ್ತಿದೆ. ಹವಾಮಾನ ಇಲಾಖೆ ನಾಗರಿಕರಿಗೆ ಈ ಎಚ್ಚರಿಕೆ ನೀಡಿದ್ದು ತಪ್ಪದೇ ಗಮನಿಸಿ.

ಕಳೆದ ವಾರ ಕೆಲವೆಡೆ ವಾಯಭಾರ ಕುಸಿತದಿಂದ ತುಂತುರು ಮಳೆಯಾಗಿತ್ತು. ಆದರೆ ಈಗ ಬಿಸಿಲು, ಮಂಜು, ಮೋಡ ಕವಿದ ವಾತಾವರಣವಿರುತ್ತದೆ. ಇದರೊಂದಿಗೆ ಚಳಿ ಹೆಚ್ಚಾಗಿದ್ದು, ಕೆಲವೆಡೆ ತಾಪಮಾನ ವಿಪರೀತ ಎನಿಸುವಷ್ಟು ಇಳಿಕೆಯಾಗಿದೆ.

ವಿಶೇಷವಾಗಿ ಕರ್ನಾಟಕದ ಉತ್ತರ ಭಾಗದಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕೆಲವು ದಿನ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ನಾಳೆಯವರೆಗೂ ಕೆಲವೆಡೆ ಮೋಡ ಕವಿದ ವಾತಾವರಣವಿರಲಿದೆ. ಬಳಿಕ ಒಣ ಹವೆ ಮುಂದುವರಿಯಲಿದೆ ಎನ್ನಲಾಗಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿಯಿದ್ದರೆ ಕನಿಷ್ಠ ತಾಪಮಾನ 15 ಡಿಗ್ರಿಗೆ ಇಳಿಕೆಯಾಗಿದೆ. ತುಮಕೂರಿನಲ್ಲಿ ಕನಿಷ್ಠ ತಾಪಮಾನ 13 ಡಿಗ್ರಿ, ಶಿವಮೊಗ್ಗದಲ್ಲಿ 14 ಡಿಗ್ರಿಗೆ ಬಂದಿದೆ. ಉಳಿದಂತೆ ಬೀದರ್, ಕಲಬುರಗಿ, ಧಾರವಾಡ, ಹಾವೇರಿ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಚಳಿಯ ವಾತಾವರಣ ಮುಂದುವರಿದಿದೆ. ಮುಂದಿನ ಕೆಲವು ದಿನಗಳ ಕಾಲ ಇದೇ ತಾಪಮಾನ ಮುಂದುವರಿಯಲಿದ್ದು ವಯೋವೃದ್ಧರು ಆದಷ್ಟು ಸಂಜೆ ಮತ್ತು ಬೆಳಿಗ್ಗೆನ ಹೊತ್ತು ಹೊರಗಡೆ ಓಡಾಡುವುದನ್ನು ಕಡಿಮೆ ಮಾಡುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ