Karnataka Weather: ಈ ವರ್ಷ ಚಳಿಗಾಲ ಆರಂಭ ಯಾವಾಗ, ಹೇಗಿರಲಿದೆ ತೀವ್ರತೆ
ಈ ವರ್ಷ ಬೇಸಿಗೆಗಾಲದಲ್ಲಿ ತಾಪಮಾನ ದಾಖಲೆಯ ಮಟ್ಟಕ್ಕೆ ತಲುಪಿತ್ತು. ಬೆಂಗಳೂರಿನಲ್ಲೂ ಅತೀ ಹೆಚ್ಚು ಬಿಸಿಲು, ತಾಪಮಾನ ದಾಖಲಾಗಿತ್ತು. ಮಳೆಗಾಲವೂ ಅದೇ ಕತೆ. ಮೇ ಅಂತ್ಯದಲ್ಲೇ ಮುಂಗಾರಿನ ಆಗಮನವಾಗಿತ್ತು. ಈಗಲೂ ಮಳೆಗಾಲ ಮುಂದುವರಿದಿದೆ.
ನಿರೀಕ್ಷೆಯಂತೇ ಈ ಬಾರಿ ಬೇಸಿಗೆ ಮತ್ತು ಮಳೆಗಾಲ ಸುದೀರ್ಘವಾಗಿದೆ. ಚಳಿಗಾಲವೂ ಈ ಬಾರಿ ವಿಪರೀತಕ್ಕೆ ತೆರಳಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ವರ್ಷ ನವಂಬರ್ ನಿಂದ ಫೆಬ್ರವರಿಯವರೆಗೆ ಚಳಿಗಾಲವಿರಲಿದೆ.
ಈ ವರ್ಷ ಚಳಿಯೂ ದಾಖಲೆಯ ಮಟ್ಟಕ್ಕೆ ತಲುಪಲಿದೆ ಎನ್ನಲಾಗಿದೆ. ಉತ್ತರದ ಬಹುತೇಕ ರಾಜ್ಯಗಳು ಶೀತ ಗಾಳಿಯಿಂದ ತತ್ತರಿಸಲಿವೆ ಎಂದು ಹವಾಮಾನ ವರದಿಗಳು ಎಚ್ಚರಿಕೆ ನೀಡಿವೆ. ಹೀಗಾಗಿ ಈ ಬಾರಿ ಚಳಿಗಾಲದ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ.