ಕಾಶ್ಮೀರ ಸಿನಿಮಾ ನಾ ನೋಡಿಲ್ಲ. ಅದು ನಿರ್ದೇಶಕರ ಒಂದು ಕಲ್ಪನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕೊನೆಗೆ ಇದೊಂದು ಸಿನಿಮಾ ಅಷ್ಟೇ. ಆ ಘಟನೆ ಆಗಿಲ್ಲ ಎಂದು ಹೇಳ್ತಾ ಇಲ್ಲ. ಆದರೆ ಇದು ನಿರ್ದೇಶಕರ ಒಂದು ಕಲ್ಪನೆ. ಅಂತಿಮವಾಗಿ ಇದೊಂದು ಸಿನಿಮಾ ಅಷ್ಟೇ ಎಂದರು.
ಗೋಧ್ರಾ ಘಟನೆ ಬಗ್ಗೆ ಏಕೆ ಸಿನಿಮಾ ಆಗುತ್ತಿಲ್ಲ?. ಅದನ್ನೂ ತೋರಿಸಿ. ಕೋಮು ಗಲಭೆ ಆಗಬಾರದು. ಗಲಭೆ ಆದಾಗ ಒಂದು ಸರ್ಕಾರದ ಜವಾಬ್ದಾರಿ ಏನಿತ್ತು ಅದನ್ನು ಮಾಡಬೇಕು. ಆಗ ಯಾವ ಸರ್ಕಾರ ಯಾವುದಿತ್ತು ಎಂಬ ಬಗ್ಗೆನೂ ಚರ್ಚೆಯಾಗಬೇಕು ಎಂದು ತಿಳಿಸಿದರು. ನಮ್ಮ ಕರ್ನಾಟಕ ಸರ್ಕಾರ ಕಾಶ್ಮೀರ ಬಿಟ್ಟು ಕರ್ನಾಟಕಕ್ಕೆ ಬಂದರೆ ಜನರಿಗೆ ಉಪಯೋಗ ಆಗುತ್ತದೆ. ಕನ್ನಡದಲ್ಲಿ ಸಿನಿಮಾ ಡಬ್ಬಂಗ್ ಆಗುವುದಾದರೆ ಆಗಲಿ. ನೋಡುವವರು ನೋಡುತ್ತಾರೆ ಎಂದು ತಿಳಿಸಿದರು.