ಕನ್ನಡಿಗರ ಹೋರಾಟಕ್ಕೆ ಮಣಿದ ಕೇರಳ ಸರ್ಕಾರ

ಮಂಗಳವಾರ, 29 ಜೂನ್ 2021 (10:02 IST)
ಬೆಂಗಳೂರು: ಕೇರಳ ಗಡಿ ಜಿಲ್ಲೆ ಕಾಸರಗೋಡಿನ ಕೆಲವು ಕನ್ನಡ ಗ್ರಾಮಗಳ ಹೆಸರನ್ನು ಮಲಯಾಳೀಕರಣಗೊಳಿಸಲು ಹೊರಟಿದ್ದ ಅಲ್ಲಿನ ರಾಜ್ಯ ಸರ್ಕಾರ ಕೊನೆಗೂ ಕನ್ನಡಗಿರ ಹೋರಾಟಕ್ಕೆ ಮಣಿದು ಪ್ರಸ್ತಾವನೆ ಕೈಬಿಟ್ಟಿದೆ.

 
ಕಾಸರಗೋಡಿನಲ್ಲಿ ಕನ್ನಡದಲ್ಲಿರುವ ಗ್ರಾಮಗಳ ಹೆಸರುಗಳನ್ನು ಮಲಯಾಳಂಗೆ ಬದಲಾಯಿಸಲು ಹೊರಟಿದ್ದ ಸರ್ಕಾರಕ್ಕೆ ಅಲ್ಲಿನ ಗಡಿನಾಡ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪನವರೇ ಕೇರಳ ಸಿಎಂ ಪಿಣರಾಯಿ  ವಿಜಯನ್ ಗೆ ಈ ಕುರಿತು ಪತ್ರ ಬರೆದು ಪ್ರಸ್ತಾವನೆ ಮರುಪರಿಶೀಲಿಸುವಂತೆ ಮನವಿ ಮಾಡಿದ್ದರು.

ಇದೆಲ್ಲದರ ಬೆನ್ನಲ್ಲೇ ಕೇರಳ ಸರ್ಕಾರ ಈಗ ಇಂತಹದ್ದೊಂದು ಪ್ರಸ್ತಾವನೆ ಕೈಬಿಟ್ಟಿದೆ. ಈ ಬಗ್ಗೆ ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ಹೇಳಿಕೆ ನೀಡಿದ್ದು, ಕನ್ನಡ ಹೆಸರುಗಳುಳ್ಳ ಕೇರಳದ ಗ್ರಾಮಗಳನ್ನು ಬದಲಿಸುವ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ