KGF – 2 ಚಿತ್ರೀಕರಣಕ್ಕೆ ತಡೆ : ಸ್ಥಳೀಯರು ಮಾಡಿದ್ದೇನು?

ಬುಧವಾರ, 28 ಆಗಸ್ಟ್ 2019 (17:02 IST)
ಕೆಜಿಎಫ್ ಭಾಗ ಎರಡನೇ ಚಿತ್ರದ ಚಿತ್ರೀಕರಣ ಸ್ಥಗಿತವಾಗಿರುವುದನ್ನು ವಿರೋಧಿಸಿ ಸ್ಥಳೀಯ ಕೂಲಿಕಾರರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಸ್ವಾರ್ಥಿಗಳ ಕೈವಾಡದಿಂದ ಚಿತ್ರೀಕರಣ ಸ್ಥಗಿತವಾಗಿರೋದ್ರಿಂದ ನಮಗೆ ಸಿಗ್ತಿದ್ದ ಕೂಲಿಗೆ ಸಂಚಕಾರ ಬಂದಿದೆ ಅಂತ ಪ್ರತಿಭಟಿಸಿದ್ದಾರೆ. ಪ್ರಸ್ತುತ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ನಟ ಯಶ್ ಅಭಿನಯದ ಈ ಚಿತ್ರದ ಚಿತ್ರೀಕರಣವು ಸ್ಥಗಿತವಾಗಿದೆ.

  
ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ ನಟ ಯಶ್ ಅಭಿನಯದ ಕೆಜಿಎಫ್ ಭಾಗ 2 ರ ಚಿತ್ರೀಕರಣಕ್ಕೆ ಸ್ಥಳೀಯ ಕೋರ್ಟ್ ತಡೆಯಾಜ್ಞೆ ನೀಡಿದೆ. ಚಿತ್ರ ತಂಡವು ಇಲ್ಲಿನ ಸೈಯನೈಡ್ ಗುಡ್ಡದ ಪರಿಸರವನ್ನು ಹಾಳು ಮಾಡುತ್ತಿದೆ ಅಂತ ಆರೋಪಿಸಿ ಶ್ರೀನಿವಾಸ್ ಎನ್ನುವವರು ಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನಲೆಯಲ್ಲಿ ಕೆಜಿಎಫ್ ಭಾಗ ಎರಡರ ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸುವಂತೆ ಕೋರ್ಟ್ ಆದೇಶಿಸಿತ್ತು.

ಕೆಜಿಎಫ್ ಭಾಗ ಎರಡರ ಸಿನಿಮಾದ ಚಿತ್ರೀಕರಣವು ಸ್ಥಗಿತವಾಗಿರುವುದು ಇಲ್ಲಿನ ಮಹಿಳಾ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ. ಚಿತ್ರೀಕರಣದ ಸಮಯದಲ್ಲಿ ಅಷ್ಟೋ-ಇಷ್ಟೋ ಸಿಗ್ತಿದ್ದ ಕೂಲಿ ಕೆಲವರ ಚಿತಾವಣೆಯಿಂದ ನಿಂತೋಯ್ತು ಅಂತ ಅವು ಬೇಸರ ವ್ಯಕ್ತಪಡಿಸಿದ್ರು. ಕೆಜಿಎಫ್ ಗಣಿ ಕಾರ್ಖಾನೆ ಮತ್ತೆ ಪ್ರಾರಂಭ ಮಾಡೋದಿಕ್ಕೆ ಹೋರಾಟ ಮಾಡದವ್ರು, ಇಲ್ಲಿನ ನಮಗೆ ಸಿಕ್ತಿದ್ದ ಕೂಲಿಗೆ ಕಲ್ಲು ಹಾಕಿದ್ದಾರೆ ಅಂತ ಅವ್ರು ದೂರಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ