ನಟ ಸುದೀಪ್ ಮೇಲೆ ಕೇಸ್ ಹಾಕಿ ಎಂದ ಮುಸ್ಲಿಂ ಯುವಕರು!

ಭಾನುವಾರ, 24 ಫೆಬ್ರವರಿ 2019 (14:18 IST)
ಚಿತ್ರದ ನಿರ್ದೇಶಕ ಹಾಗೂ ನಟ ಕಿಚ್ಚ ಸುದೀಪ್ ಮೇಲೆ ದೂರು ದಾಖಲಿಸುವಂತೆ ಯುವಕರು ಪಟ್ಟು ಹಿಡಿದಿರುವ ಘಟನೆ ನಡೆದಿದೆ.
ಬೀದರ್ ನಲ್ಲಿ ಸಾಯಿ ರಾ ನರಸಿಂಹ ರೆಡ್ಡಿ ಚಿತ್ರೀಕರಣಕ್ಕೆ  ಮುಸ್ಲಿಂ ಯುವಕರ ಗುಂಪಿನಿಂದ ವಿರೋಧ ವ್ಯಕ್ತವಾಗಿದೆ.
ಕೋಟೆಯಲ್ಲಿದ್ದ ಮುಸ್ಲಿಂ ಪ್ರಾರ್ಥನಾ ಸ್ಥಳದಲ್ಲಿ ಶೂಟಿಂಗ್ ಗೆ ಮುಸ್ಲಿಂ ಯುವಕರ ಗುಂಪಿನಿಂದ ಅಡ್ಡಿಯುಂಟಾಗಿದೆ.
ಮಜೀದ್ ನಲ್ಲಿ ಹಿಂದು ಮೂರ್ತಿಗಳು ಇಟ್ಟಿದ್ದಕ್ಕೆ ಮುಸ್ಲಿಂ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದು ಮೂರ್ತಿ ತೆರವುಗೊಳಿಸಲು ರಾತ್ರೊ ರಾತ್ರಿ ಜಿಲ್ಲಾಧಿಕಾರಿ ನಿವಾಸದ ಎದುರು ಪ್ರತಿಭಟನೆ ನಡೆದಿದೆ.
ಸಾಯಿ ರಾ ನರಸಿಂಹ ರೆಡ್ಡಿ ಇದೊಂದು ಹಿಸ್ಟೊರಿಕಲ್ ಸಿನಿಮಾ ಆಗಿದೆ. ಹೀಗಾಗಿ ನಗರದ ಬಹುಮನಿ ಕೋಟೆಯಲ್ಲಿ ಹಿಂದೂ ಮೂರ್ತಿಗಳನ್ನಿಟ್ಟು ಶೂಟಿಂಗ್ ಸೆಟ್ ಹಾಕಲಾಗಿದೆ. ಕೋಟೆಯ‌ ಮಜೀದ್ ನಲ್ಲಿ ಹಿಂದೂಗಳ ಮೂರ್ತಿಯನ್ನಿಟ್ಟು ಶೂಟಿಂಗ್ ಸೆಟ್ ಹಾಕಿದ್ದಕ್ಕೆ ವಿರೋಧ ಕೇಳಿಬರುತ್ತಿದೆ.
ಪುರಾತತ್ವ ಇಲಾಖೆಯಿಂದ ಅನುಮತಿ ಪಡೆದರೂ ಚಿತ್ರಿಕರಣಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಯುವಕರು.

ಹಿಂದು ಮೂರ್ತಿಗಳು ಹಾಗೂ ಚಿತ್ರೀಕರಣಕ್ಕೆ ಹಾಕಲಾಗಿದ್ದ ಸೇಟ್ ನ್ನ ರಾತ್ರೋ ರಾತ್ರಿ ಪೊಲೀಸರು ತೆರವುಗೊಳಿಸಿದ್ದಾರೆ.  ಸಾ ರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್, ಚೀರಂಜಿವಿ, ಕನ್ನಡದ ಕಿಚ್ಚ ಸುದೀಪ್ ಸೇರಿದಂತೆ ದೊಡ್ಡ ತಾರಾ ಬಳಗ ಹೊಂದಿದೆ. ಚಿತ್ರದ ಶೂಟಿಂಗ್ ಗೆ ಅಂತ ‌ಕಿಚ್ಚ ಸುದೀಪ್ ರಾತ್ರಿಯೇ ಬೀದರ್ ಗೆ ಬಂದಿದ್ದಾರೆ. ಬಹುಮನಿ ಕೋಟೆ ಸುತ್ತಮುತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಂದೋಬಸ್ತ್ ಒದಗಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ