ಕೆಜಿಎಫ್ - 2 ಚಿತ್ರೀಕರಣಕ್ಕೆ ಕೋರ್ಟ್ ತಡೆಯಾಜ್ಞೆ
ಬಹುನಿರೀಕ್ಷಿತ ಹಾಗೂ ಅದ್ದೂರಿ ಚಿತ್ರ ಕೆಜಿಎಫ್ - 2 ಚಿತ್ರೀಕರಣಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ.
ಕೋಲಾರದ ಕೆಜಿಎಫ್ ನ ಜೆಎಂಎಫ್ ಸಿ ಕೋರ್ಟ್ ನಿಂದ ತಡೆಯಾಜ್ಞೆ ಆದೇಶ ಹೊರಡಿಸಲಾಗಿದೆ.
ಕೆಜಿಎಫ್ ನ ಸಯನೈಡ್ ದಿಬ್ಬದ ಪರಿಸರ ಕಲುಷಿತಗೊಳಿಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ತಡೆಯಾಜ್ಞೆ ಕೊಟ್ಟಿದೆ ಕೋರ್ಟ್.
ಕೆಜಿಎಫ್ ನಗರದ ಶ್ರೀನಿವಾಸ್ ಎಂಬುವರು ಕೋರ್ಟ್ ಮೊರೆ ಹೋಗಿದ್ರು.
ಸಿನಿಮಾ ನಿರ್ಮಾಪಕರಿಗೆ ನೊಟೀಸ್ ಜಾರಿಗೊಳಿಸಿದೆ ಕೋರ್ಟ್. ನಟ ಯಶ್ ಅಭಿನಯದ ಕೆಜಿಎಫ್-2 ಸಿನಿಮಾದ ಚಿತ್ರೀಕರಣಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ.