ಸ್ವಲ್ಪ ಲೇಟ್ ಆಗುತ್ತೆ, ಕೊಟ್ಟೇ ಕೊಡ್ತೀವಿ: ಅನ್ನಭಾಗ್ಯ ಅಕ್ಕಿ ಸಿಕ್ತಿಲ್ಲ ಎಂದರೆ ಮುನಿಯಪ್ಪ ರಿಯಾಕ್ಷನ್

Krishnaveni K

ಮಂಗಳವಾರ, 18 ಮಾರ್ಚ್ 2025 (15:04 IST)
ಬೆಂಗಳೂರು: ಸ್ವಲ್ಪ ಲೇಟ್ ಆಗ್ತಿದೆ, ಆದರೆ ಕೊಡುವುದನ್ನು ಕೊಟ್ಟೇ ಕೊಡುತ್ತೇವೆ ಎಂದು ಅನ್ನಭಾಗ್ಯ ಅಕ್ಕಿ  ವಿತರಣೆ ಬಗ್ಗೆ ಆಹಾರ ಸಚಿವ ಕೆಎಚ್ ಮುನಿಯಪ್ಪ ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಈ ತಿಂಗಳು 15 ಕೆ.ಜಿ. ಅಕ್ಕಿ ಕೊಡಬೇಕಾಗಿತ್ತು. ಇದುವರೆಗೆ 5 ಕೆ.ಜಿ ಬಾಬ್ತು ಹಣ ನೀಡಲಾಗುತ್ತಿತ್ತು. ಆದರೆ ಈ ತಿಂಗಳಿನಿಂದ ಹಣದ ಬದಲು ಅಕ್ಕಿಯನ್ನೇ ನೀಡುವುದಾಗಿ ಘೋಷಣೆ ಮಾಡಲಾಗಿತ್ತು.

ಆದರೆ ಈ ತಿಂಗಳಿನ ಪಡಿತರ ಪಡೆಯು ಹೋದ ಫಲಾನುಭವಿಗಳಿಗೆ ಶಾಕ್ ಆಗಿತ್ತು. ಬಹುತೇಕ ಜಿಲ್ಲೆಗಳಲ್ಲಿ ಪಡಿತರ ವಿತರಣಾ ಕೇಂದ್ರದಲ್ಲಿ ನೋ ಸ್ಟಾಕ್ ಬೋರ್ಡ್ ಕಂಡುಬಂದಿದೆ. ಇದರಿಂದಾಗಿ ಅತ್ತ ಹಣವೂ ಇಲ್ಲ ಇತ್ತ ಅಕ್ಕಿಯೂ ಇಲ್ಲ ಎಂದು ಫಲಾನುಭವಿಗಳು ಹಿಡಿಶಾಪ ಹಾಕಿದ್ದರು.

ಆದರೆ ಈ ಬಗ್ಗೆ ಈಗ ಸಚಿವರು ಸ್ಪಷ್ಟನೆ ನೀಡಿದ್ದರು. ಸ್ವಲ್ಪ ತಾಂತ್ರಿಕ ಸಮಸ್ಯೆಗಳಿಂದ ಈ ಬಾರಿ ಅಕ್ಕಿ ವಿತರಣೆ ಸ್ವಲ್ಪ ತಡವಾಗಿದೆ. ಇಷ್ಟು ದಿನ ಟ್ರಾನ್ಸ್ ಪೋರ್ಟ್ ಗಾಡಿಗಳು 5 ಕೆ.ಜಿ. ಅಕ್ಕಿ ಲಿಫ್ಟ್ ಮಾಡುತ್ತಿತ್ತು. ಈಗ 15 ಕೆ.ಜಿ. ಮಾಡಬೇಕಿದೆ. ಹೀಗಾಗಿ ಸ್ವಲ್ಪ ತಡವಾಗಿದೆ. ಆದರೆ ಈ ತಿಂಗಳೊಳಗಾಗಿ ಎಲ್ಲಾ ಕಡೆ ಕೊಟ್ಟೇ ಕೊಡ್ತೀವಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ