ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಈ ತಿಂಗಳಿನಿಂದ ಅಕ್ಕಿ ವಿತರಣೆಯಲ್ಲಿ ಬಂಪರ್

Krishnaveni K

ಸೋಮವಾರ, 3 ಮಾರ್ಚ್ 2025 (11:59 IST)
ಬೆಂಗಳೂರು: ಬಿಪಿಎಲ್ ಕಾರ್ಡ್ ಹೊಂದಿರುವ ರಾಜ್ಯದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕಾದಿದೆ. ಈ ತಿಂಗಳಿನಿಂದ ಅಕ್ಕಿ ವಿತರಣೆಯಲ್ಲಿ ಬಂಪರ್ ಸಿಗಲಿದೆ.

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ದಾರರಿಗೆ ಪ್ರತೀ ತಿಂಗಳು 10 ಕೆ.ಜಿ. ಅಕ್ಕಿ ಸಿಗುತ್ತದೆ. ಇದುವರೆಗೆ ರಾಜ್ಯ ಸರ್ಕಾರ 5 ಕೆ.ಜಿ ಅಕ್ಕಿ ಮತ್ತು ಇನ್ನು ಉಳಿದ 5 ಕೆ.ಜಿ ಬಾಬ್ತು ಖಾತೆಗೆ ಹಣ ನೀಡುತ್ತಿತ್ತು.

ಆದರೆ ಈ ತಿಂಗಳಿನಿಂದ ನಿಯಮ ಬದಲಾಗಿದೆ. ಕಳೆದ ಕೆಲವು ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಹಣ ಹಾಕಿರಲಿಲ್ಲ. ಹೀಗಾಗಿ ಜನರಿಂದ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಹೊಸ ತೀರ್ಮಾನಕ್ಕೆ ಬಂದಿತ್ತು.

ಅದರಂತೆ 5 ಕೆ.ಜಿ ಅಕ್ಕಿ ಹಣದ ಬದಲು ಅಕ್ಕಿಯನ್ನೇ ನೀಡಲು ಮುಂದಾಗಿತ್ತು. ಅದರಂತೆ ಫಲಾನುಭವಿಗಳಿಗೆ ಈ ತಿಂಗಳಿನಿಂದಲೇ ಒಟ್ಟು 10 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುತ್ತದೆ. ಫೆಬ್ರವರಿ ತಿಂಗಳಿನದ್ದೂ ಸೇರಿಸಿ ಈ ತಿಂಗಳ ಬಾಬ್ತಿನ ಅಕ್ಕಿ ವಿತರಿಸಲಾಗುತ್ತದೆ ಎಂದು ಆಹಾರ ಖಾತೆ ಸಚಿವ ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ