ಪೊಲೀಸ್ ಎಂದು ಯಾಮಾರಿಸುತ್ತಿದ್ದ ಖದೀಮರ ಬಂಧನ

ಮಂಗಳವಾರ, 19 ಫೆಬ್ರವರಿ 2019 (20:10 IST)
ಪೊಲೀಸರು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ ಇಬ್ಬರು ಖತರ್ನಾಕ ಕಳ್ಳರನ್ನು ಬಂಧಿಸಲಾಗಿದೆ.

ಕಲಬುರಗಿ ನಗರದ ಯಾದುಲ್ಲಾ ಕಾಲೋನಿಯ ಮಿರ್ಜಾ ಜಮೀರ್ ಬೇಗ್ ತಂದೆ ಮಿರ್ಜಾ ಅಲಿ ಬೇಗ್ ಮತ್ತು ಮಿಜುಗುರಿ ಬಡಾವಣೆಯ ಮೋಸಿನ್ ಅಹ್ಮದ್ ತಂದೆ ಸಲಿಮೋದ್ದೀನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಈಚೆಗೆ ಇವರಿಬ್ಬರು ಎಂ.ಎಸ್.ಕೆ.ಮಿಲ್ ನಿವಾಸಿ ಸಮೀರ್ ಮೂಸಾ ಕುಡಚಿ ಎಂಬುವವರಿಗೆ ಬೈಕ್ ಕೊಡಿಸುವುದಾಗಿ ಅವರ ಬಳಿ 5,100 ರೂಪಾಯಿ ತೆಗೆದುಕೊಂಡು ವಂಚನೆ ಮಾಡಿದ್ದರು. ಸಮೀರ್ ಮೂಸಾ ಕುಡಚಿ ಸಂಬಂಧಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ದೂರಿನ ಅನ್ವಯ ಎಸ್ಪಿ ಎನ್.ಶಶಿಕುಮಾರ, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಗ್ರಾಮೀಣ ಡಿಎಸ್ಪಿ ಎಸ್.ಎಸ್.ಹುಲ್ಲೂರ್ ಮಾರ್ಗದರ್ಶನದಲ್ಲಿ ಗ್ರಾಮೀಣ ಸಿಪಿಐ ರಾಘವೇಂದ್ರ, ಪಿಎಸ್ಐ ಚಂದ್ರಶೇಖರ ತಿಗಡಿ ಹಾಗೂ ಸಿಬ್ಬಂದಿ ತನಿಖೆ ನಡೆಸಿ ಆರೋಪಿಗಳನ್ನು  ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಗಳು ಇದೇ ರೀತಿ ಹಲವಾರು ಜನರನ್ನು ವಂಚಿಸಿ ಹಣ ವಸೂಲಿ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ