ಕಂಠೀರವ ಸ್ಟೇಡಿಯಂ ನಲ್ಲಿ ಖಾಕಿ ಸರ್ಪಗಾವಲು

ಶುಕ್ರವಾರ, 19 ಮೇ 2023 (15:01 IST)
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ ಹಿನ್ನಲೆ ನಗರ ಪೊಲೀಸ್ ಇಲಾಖೆಯಿಂದ ಕಾರ್ಯಾಕ್ರಮಕ್ಕೆ ಮ್ಯಾಪಿಂಗ್ ಮ್ಯಾಪಿಂಗ್ ಮಾಡಲಾಗಿದೆ.ರಾಮನಗರ,ಮೈಸೂರು,ಉತ್ತರ ಕರ್ನಾಟಕ ಹಾಗೂ ಕೋಲಾರದಿಂದ ಲಕ್ಷಾಂತರ ಮಂದಿ ಆಗಮನ ಬಗ್ಗೆ ಪೊಲೀಸ್ರಿಗೆ ಮಾಹಿತಿ ಲಭಿಸಿದ್ದು,ಗುಪ್ತಚರ ಇಲಾಖೆಯಿಂದ ಮಾಹಿತಿ ಹಿನ್ನಲೆ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ.ಕಂಠೀರವ ಸ್ಟೇಡಿಯಂನ ಅಷ್ಟ ದಿಕ್ಕುಗಳಲ್ಲಿ ಪೊಲೀಸರಿಂದ ಭದ್ರತೆಗೆ ಪ್ಲಾನ್ ಮಾಡಲಾಗಿದೆ.ಪ್ರಮುಖವಾಗಿ ಕಂಠೀರವ ಸ್ಟೇಡಿಯಂನ ಎರಡು ಗೇಟ್ ಗಳಲ್ಲಿ ವಿವಿಐಪಿಗೆ ಮಾತ್ರ ವಾಹನಗಳ ಎಂಟ್ರಿಗೆ ಅವಕಾಶ ಕೊಡಲಾಗಿದೆ .ವಿವಿಐಪಿಗೆ ಪ್ರತ್ಯೇಕವಾಗಿ ಒಳಗೆ ಹೋಗಲು ಪೊಲೀಸ್ರು ವ್ಯವಸ್ಥೆ ಮಾಡಿದ್ದಾರೆ.ಪೊಲೀಸ್ ಕಮಿಷನರ್, ಟ್ರಾಫಿಕ್ ಸ್ಪೆಷಲ್ ಕಮಿಷನರ್, ಜಂಟಿ ಇಬ್ಬರು ಪೊಲೀಸ್ ಆಯುಕ್ತರು ಸೇರಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಎಂಟು ಮಂದಿ ಡಿಸಿಪಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.ಪ್ರಮಾಣವಚನ ಕಾರ್ಯಕ್ರಮವನ್ನೇ ಶಕ್ತಿ ಪ್ರದರ್ಶನ ವೇದಿಕೆಯನ್ನಾಗಿಸಿ ಕಹಳೆ ಮೊಳಗಿಸಲು ಕಾಂಗ್ರೆಸ್  ಸಿದ್ದತೆ ನಡೆಸಿದೆ.
 
ಪದಗ್ರಹಣ ಕಾರ್ಯಕ್ರಮಕ್ಕೆ 1,500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.ಎಂಟು ಗೇಟ್ ಗಳಲ್ಲಿ ಓರ್ವ ಎಸಿಪಿ ಮಟ್ಟದ ಅಧಿಕಾರಿಗಳಿಂದ ಭದ್ರತಾ ವ್ಯವಸ್ಥೆ ಮಾಡಲಾಗಿದೆ.ಹತ್ತು ಮಂದಿ ಎಸಿಪಿ, 28 ಮಂದಿ ಇನ್ಸ್ ಪೆಕ್ಟರ್  ಗಳ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.500 ಮಂದಿ ಸಂಚಾರಿ ಪೊಲೀಸ್ರಿಂದ ಸಂಚಾರ ದಟ್ಟಣೆಯಾಗದಂತೆ ರೋಡ್ ಡೈವರ್ಷನ್ ಮಾಡಲಾಗಿದೆ.
 
ಕಂಠೀರವ ಸ್ಟೇಡಿಯಂ ನಲ್ಲಿ ಪದಗ್ರಹಣ ಕಾರ್ಯಕ್ರಮ ಹಿನ್ನೆಲೆ ಸ್ಟೇಡಿಯಂ ನಲ್ಲಿ ಸಿದ್ಧತೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಆಗಮಿಸಿದ್ದು,ಕಾರ್ಯಕ್ರಮದ ಸಿದ್ದತೆ ಬಗ್ಗೆ  ಅಧಿಕಾರಿಗಳು ಪರಿಶೀಲನೆ ಮಾಡ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ