ಆದ್ರೆ, ಕೆಲವೇ ನಿಮಿಷಗಳ ನಂತರ ಇಲ್ಲ ನಿಮ್ಗೆ ಹೆಣ್ಣು ಮಗು ಆಗಿದೆ ಎಂದು ನರ್ಸ್ ಗಳು ಗಂಡು ಮಗುವನ್ನು ವಾಪಸ್ಸು ಪಡೆದು ಹೆಣ್ಣು ಮಗುವನ್ನು ನೀಡಿದ್ದು ಇದ್ರಿಂದ ಕುಟುಂಬಸ್ಥರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಇನ್ನು ಪ್ರಕರಣ ಕೂಡ ದಾಖಲಿಸಲು ಮುಂದಾಗಿದ್ದಾರೆ.
ಹೌದು, ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಅದಲು ಬದಲು ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಡ್ತಿದೆ. ಇಂದು ಕೂಡ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳು ಅದಲು ಬದಲು ಪ್ರಕರಣ ನಡೆದಿದ್ದು ಮೊದಲು ಗಂಡು ಮಗು ನೀಡಿದ ನರ್ಸ್ ಗಳು ನಂತರ ಹೆಣ್ಣು ಮಗು ತಂದು ಕೊಟ್ಟಿರೋದ್ರಿಂದ ಪಾಲಕರು ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ವೈದ್ಯರ ಮತ್ತು ನರ್ಸ್ ಗಳ ಮಕ್ಕಳ ಅದಲು ಬದಲು ಪ್ರಕರಣ ನಡೆ ಅನುಮಾನಕ್ಕೆ ಅನುವು ಮಾಡಿಕೊಟ್ಟಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಣಸಿರಸಿಗಿ ಗ್ರಾಮದ ನಂದಮ್ಮ ಎನ್ನುವ ಮಹಿಳೆಗೆ ನಿನ್ನೆ ರಾತ್ರಿ ಹೆರಿಗೆ ಆಗಿದೆ. ಗಂಡು ಮಗು ಜನಿಸಿದೆ ಅಂತಾ ನರ್ಸ್ ಗಳು ಆಕೆಯ ಕೈಗೆ ಗಂಡು ಮಗುವನ್ನು ಕೂಡ ನೀಡಿದ್ದಾರೆ. ಆದ್ರೆ, ಕೆಲವೇ ನಿಮಿಷಗಳಲ್ಲಿ ನರ್ಸ್ ಗಳು ಅವರ ಬಳಿ ಬಂದು, ನಿಮ್ಗೆ ಕಂಡು ಮಗು ಆಗಿಲ್ಲ ಹೆಣ್ಣು ಮಗು ಆಗಿದೆ ಎಂದು ಅವರ ಕೈಗೆ ಹೆಣ್ಣು ಮಗು ನೀಡಿದ್ದಾರೆ. ಇದ್ರಿಂದ ಕುಟುಂಬಸ್ಥರು ಆಕ್ರೋಶಗೊಂಡಿದ್ದು, ಪ್ರಕರಣ ದಾಖಲಿಸಲು ಮುಂದಾಗಿದ್ದಾಗಿರೆ.