ಮದುವೆಗೆ ಒಪ್ಪದ ಹಿನ್ನೆಲೆ ಶಾಲಾ ಶಿಕ್ಷಕಿಯ ಅಪಹರಣ
ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿರುವ ಘಟನೆ ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ನಡೆದಿದೆ.
15 ದಿನಗಳ ಹಿಂದೆ ಮದುವೆ ಪ್ರಸ್ತಾಪದೊಂದಿಗೆ ಶಿಕ್ಷಕಿ ಅರ್ಪಿತಾ ಮನೆಗೆ, ಸಂಬಂಧಿ ರಾಮು ಮತ್ತು ಪೋಷಕರು ಬಂದಿದ್ದರು. ಮದುವೆ ಪ್ರಸ್ತಾಪಕ್ಕೆ ಶಿಕ್ಷಕಿ ಅರ್ಪಿತಾ ಹಾಗೂ ಪೋಷಕರು ಒಪ್ಪಿರಲಿಲ್ಲ. ಈ ಕಾರಣಕ್ಕಾಗಿ ಅರ್ಪಿತಾ ಅವರನ್ನು ರಾಮು ಅಪಹರಿಸಿರುವ ಆರೋಪ ಕೇಳಿಬಂದಿದೆ.