ಚಿನ್ನಕ್ಕಾಗಿ ಅಜ್ಜ-ಅಜ್ಜಿಯನ್ನ ಕೊಲೆ ಮಾಡಿ ಪರಾರಿ

ಗುರುವಾರ, 27 ಜುಲೈ 2023 (12:55 IST)
ದಕ್ಷಿಣ ಕನ್ನಡ : ಮಂಗಳೂರಿನಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ನಗರದ ಸ್ಟ್ರೀಟ್ನಲ್ಲಿರುವ ಚಿನ್ನದ ಅಂಗಡಿಯೊಂದಕ್ಕೆ ಚಿನ್ನಾಭರಣಗಳನ್ನು ಮಾರಾಟ ಮಾಡಲು ಆಗಮಿಸಿದ್ದ. ಈ ವೇಳೆ ಆತನ ಮೇಲೆ ಅನುಮಾನಗೊಂಡು ಮಂಗಳೂರು ಉತ್ತರ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದರು.
 
ಬಳಿಕ ಆತನನ್ನ ವಿಚಾರಿಸಿದಾಗ ಇತ ‘ತ್ರಿಶೂರ್ನ ವೈಲತ್ತೂರ್ ನಿವಾಸಿ ಅಹ್ಮದ್ ಅಕ್ಮಲ್ (27) ಎಂಬುದು ಬೆಳಕಿಗೆ ಬಂದಿದೆ. ಬಳಿಕ ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಇತ ಜುಲೈ 23 ರಂದು ಕೇರಳದ ತ್ರಿಶೂರ್ನಲ್ಲಿ ವಾಸವಾಗಿದ್ದ ಅಜ್ಜ ಮತ್ತು ಅಜ್ಜಿಯನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಿಕೊಂಡು ಬಂದಿದ್ದಾಗಿ ಬಾಯ್ಬಿಟಿದ್ದಾನೆ.

ಸಧ್ಯ ಈ ಪ್ರಕರಣವನ್ನ ಬೈಂದೂರು ಇನ್ಸ್ ಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡ ಪತ್ತೆ ಮಾಡಿದೆ. ಇನ್ನು ಆರೋಪಿ ಅಹ್ಮದ್ ಅಕ್ಮಲ್ ಮಂಗಳೂರಿನಲ್ಲಿ ವ್ಯಾಸಂಗ ಮಾಡಿದ್ದ. ಹಾಗಾಗಿ ಇಲ್ಲಿನ ಬಗ್ಗೆ ಆತನಿಗೆ ಗೊತ್ತಿದ್ದರಿಂದ ಅಜ್ಜ ಅಜ್ಜಿಯನ್ನ ಕೊಲೆ ಮಾಡಿ ಚಿನ್ನಾಭರಣ ದೋಚಿಕೊಂಡು ಮಂಗಳೂರಿಗೆ ಬಂದಿದ್ದ.

ಇನ್ನು ಆತನನ್ನ ಪೊಲೀಸರು ಪರಿಶೀಲಿಸಿದಾಗ ಒಂದು ಚಾಕು, ಸ್ಕ್ರೂಡ್ರೈವರ್, ಮಂಗಳೂರು ವಿಶ್ವವಿದ್ಯಾನಿಲಯದ ಮಾರ್ಕ್ಸ್ ಕಾರ್ಡ್, ಪಾಸ್ಪೋರ್ಟ್, ಆಧಾರ್, ಸೌತ್ ಇಂಡಿಯಾ ಬ್ಯಾಂಕ್ ಕಾರ್ಡ್, ಆಕ್ಸಿಸ್ ಬ್ಯಾಂಕ್ ವೀಸಾ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಹೊಂದಿರುವ ಪರ್ಸ್. ಒಂದು ಮುತ್ತಿನ ಸರ, ಮೂರು ಜೋಡಿ ಕಿವಿಯೋಲೆಗಳು, ಒಂದು ಸಣ್ಣ ಚಿನ್ನದ ಸರದ ಜೊತೆ ಬೆರಳಿನ ಉಂಗುರಗಳು ಮತ್ತು ಎರಡು ಚಿನ್ನದ ಬಳೆಗಳು ಇದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ