ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ

ಮಂಗಳವಾರ, 25 ಜುಲೈ 2023 (18:00 IST)
ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಮದರಿ ಗ್ರಾಮದಲ್ಲಿ ನಡೆದಿದೆ. ಅಶೋಕ್ ಪ್ಯಾಟಿ ಕೊಲೆಯಾದ ವ್ಯಕ್ತಿಯಾಗಿದ್ದು, ಗುಂಡಪ್ಪ ಹಾಲಗಡ್ಲಿ, ಸೋಮು, ಜಾನಪ್ಪ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಜಾನಪ್ಪ ಎಂಬಾತನು ತನ್ನ ಚಿಕ್ಕಮ್ಮಳಿಗೆ 50 ಸಾವಿರ ರೂ ಹಣ ನೀಡಿದ್ದನು. ಜಾನಪ್ಪಳ ಚಿಕ್ಕಮ್ಮ 50 ಸಾವಿರ ರೂ. ಹಣವನ್ನ ಅಶೋಕ್‌ಗೆ ಕೊಟ್ಟಿದ್ದಳು. ಜಾನಪ್ಪನು ಅಶೋಕ್‌ನಿಗೆ 50 ಸಾವಿರ ರೂ ವಾಪಾಸು ಕೇಳಿದ್ದಾಗ ಇಬ್ಬರ ಮಧ್ಯೆ ಜಗಳವಾಗಿದೆ.ಜಗಳ ವಿಕೋಪಕ್ಕೆ ಹೋಗಿ ಜಾನಪ್ಪ, ಗುಂಡಪ್ಪ, ಸೋಮು‌ ಸೇರಿಕೊಂಡು ಅಶೋಕ್‌ನ ಬರ್ಬರ ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಮೂವರು ಆರೋಪಿಗಳಿಗೂ ಗಾಯವಾಗಿದ್ದು, ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ