ನಗರದಲ್ಲಿ ಹೊಟೇಲ್ ಕ್ಯಾಷಿಯರ್ ಕೊಲೆ

ಗುರುವಾರ, 20 ಜುಲೈ 2023 (19:50 IST)
ಹಾಡಹಗಲೇ ಪ್ರತಿಷ್ಟಿತ ಹೋಟೆಲ್ ನ ಕ್ಯಾಷಿಯರ್ನನ್ನ ಕೊಲೆ ಮಾಡಲಾಗಿದೆ. ಜೀವನ್ ಭೀಮಾನಗರ ಸಿಟಡೆಲ್ ಹೋಟೆಲ್ ಕ್ಯಾಷಿಯರ್ ‌ಆಗಿ ಕೆಲಸ ಮಾಡುತ್ತಿದ್ದವನನ್ನು ಅದೇ ಹೋಟೆಲ್ ನಲ್ಲಿ  ಹೌಸ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಯುವಕ ಕೊಲೆ ಮಾಡಿದ್ದಾನೆ.ಕೊಲೆಯಾದವನು  ಹೊಟೆಲ್ ಕ್ಯಾಷಿಯರ್ ಸುಭಾಷ್ ಆದ್ರೆ ಹತ್ಯೆ ಮಾಡಿದವನು ಹೌಸ್ ಕೀಪರ್ ಅಭಿಷೇಕ್ ಎಂದು ತಿಳಿದುಬಂದಿದೆ. ಮೃತ ಸುಭಾಷ್ ಹೋಟೆಲ್ ನಾ ಸೋಫಾ ಮೇಲೆ ಮಲಗಿದ್ದ ವೇಳೆ ಈ ಕೃತ್ಯ  ನೆಡೆದಿದ್ದು, ಕಂಠಪೂರ್ತಿ ಕುಡಿದು ಬಂದು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ವಶಕ್ಕೆ ಪಡೆದಿದ್ದು, ಸದ್ಯ ಜೆ.ಬಿ.ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ಧಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ