ಮೈತ್ರಿಗೆ ಜೆಡಿಎಸ್ ಅಲ್ಪಸಂಖ್ಯಾತ ನಾಯಕರ ವಿರೋಧ

ಭಾನುವಾರ, 24 ಸೆಪ್ಟಂಬರ್ 2023 (18:41 IST)
ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಹಿನ್ನೆಲೆ JDS ವರಿಷ್ಠರ ವಿರುದ್ಧ ಭಿನ್ನಮತ ಭುಗಿಲೆದ್ದಿದೆ. ಬಿಜೆಪಿ ಜೊತೆಗಿನ ಮೈತ್ರಿಗೆ ಜೆಡಿಎಸ್‌ ಮುಸ್ಲಿಂ ನಾಯಕರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೈತ್ರಿ ಬೆನ್ನಲ್ಲೆ ಮುಸ್ಲಿಂ ನಾಯಕರು ಸಭೆ ನಡೆಸಿದ್ದು, ಸಭೆಯಲ್ಲಿ ಜೆಡಿಎಸ್‌ ಉಪಾಧ್ಯಕ್ಷ ಶಫಿವುಲ್ಲಾ, ಅಲ್ತಾಫ್‌, ನಾಸೀರ್‌ ಉಸ್ತಾದ್‌, ನೂರ್‌ ಅಹ್ಮದ್‌ ಭಾಗಿಯಾಗಿದ್ರು. ಇನ್ನು, ಕೋಮುವಾದಿ ಪಕ್ಷದ ಜೊತೆ ಜಾತ್ಯಾತೀಯ ಪಕ್ಷ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದ ಜೆಡಿಎಸ್ ಅಲ್ಪಸಂಖ್ಯಾತ ನಾಯಕರು ಕಿಡಿಕಾರಿದ್ದಾರೆ. ಇನ್ನು, ಮೈತ್ರಿ ವಿಚಾರ ಮುಂದುವರೆದ್ರೆ, ಸಾಮೂಹಿಕವಾಗಿ ಜೆಡಿಎಸ್‌ ತೊರೆಯೋ ಬಗ್ಗೆ ಚಿಂತನೆ ನಡೆಸಲಾಗುತ್ತೆ ಎಂದು ಜೆಡಿಎಸ್‌ ಕಾರ್ಯಾಧ್ಯಕ್ಷ ಎನ್‌.ಎಂ.ನಬಿ ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ