ಬೆಂಗಳೂರು KMCC ಆಂಬ್ಯುಲೆನ್ಸ್ ಸೇವೆಯ ಬಗ್ಗೆ
ಹೆಮ್ಮೆ ಇದೆ....ಆದರೇ ಇತ್ತೀಚೆಗೆ ಈ ಸೇವೆಯನ್ನು ಈ ಆಂಬ್ಯುಲೆನ್ಸ್ ಚಾಲಕ ಹನೀಫ್ ಎಂಬಾತನು ಸ್ವಂತ ಪ್ರಚಾರಕ್ಕಾಗಿ ದುರುಪಯೋಗ ಪಡಿಸಿಕೊಂಡಿರುದು ದುರುದುಷ್ಟಕರ..ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಆಯುಕ್ತರು ಗಮನಹರಿಸಬೇಕು.....
ಈ ಸಂಸ್ಥೆಯ ಆಂಬ್ಯುಲೆನ್ಸ್ ಒಂದು ರೋಗಿಯನ್ನು ಮಂಗಳೂರು ನಿಂದ ಬೆಂಗಳೂರು ಗೇ ಯಾವುದೇ ರೋಗಿಯನ್ನು ಕರೆದುಕೊಂಡು ಹೋಗಬೇಕಾದರೆ ಜೀರೋ ಟ್ರಾಫಿಕ್ ಮಾಡಿ ಈ ಆಂಬ್ಯುಲೆನ್ಸ್ ಚಾಲಕ ಹನೀಫ್ ಎಲ್ಲಾ ರೋಗಿಯನ್ನು ಕರೆದುಕೊಂಡು ಹೋಗುವುದು ಈತನಿಗೆ ಅಭ್ಯಾಸವಾಗಿ ಹೋಗಿದೆ... ರೋಗಿಯ ತುರ್ತು ಸಂದರ್ಭದಲ್ಲಿ ಜೀರೋ ಟ್ರಾಫಿಕ್ ನಲ್ಲಿ ಆಂಬ್ಯುಲೆನ್ಸ್ ಹೋಗುವುದಕ್ಕೆ ಯಾವುದೇ ತೊಂದರೆ ಇಲ್ಲ....ಕೆಲ ಸಮಯದಲ್ಲಿ ತುರ್ತು ಸಂದರ್ಭ ಇಲ್ಲದಿದ್ದರೂ KMCC ಆಂಬ್ಯುಲೆನ್ಸ್ ಚಾಲಕ ಹನೀಫ್ ಎಂಬಾತನು ಜೀರೋ ಟ್ರಾಫಿಕ್ ಮೂಲಕ ಈತನು ಹೋಗುವುದರ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳು, ಆಯುಕ್ತರು ಈ ಬಗ್ಗೆ ಗಮನಹರಿಸಬೇಕು....
ಅಲ್ಲದೇ ಇದು ಸಾರ್ವಜನಿಕರಿಗೆ ಇದರಿಂದ ತೊಂದರೆ ಉಂಟು ಮಾಡುತ್ತದೆ..ಇಂದು ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಾದ ಇಂಡಿಯಾನಾ ಆಸ್ಪತ್ರೆಯಿಂದ 10 ದಿನದ ಮಗುವನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಜೀರೋ ಟ್ರಾಫಿಕ್ ಅವಶ್ಯಕತೆ ಇತ್ತಾ ! ಸಾಧಾರಣವಾಗಿ ಯಾವ ರೀತಿ ಆಂಬ್ಯುಲೆನ್ಸ್ ರಸ್ತೆ ಮೂಲಕ ರೋಗಿಯನ್ನು ಸಾಗಿಸುತ್ತೂ ಅದೇ ರೋಗಿಯನ್ನು ಸಾಗಿಸಿದರೆ ಸಾಕಿತ್ತು..ಆದರೆ ಜೀರೋ ಟ್ರಾಫಿಕ್ ಮಾಡಿ ಹೋಗುವ ಅವಶ್ಯಕತೆ ಏನಿತ್ತು ? ಮಂಗಳೂರಿನಲ್ಲಿ ಅದೇಷ್ಟೋ ಆಂಬ್ಯುಲೆನ್ಸ್ ಗಳು ರೋಗಿಯನ್ನು ತುರ್ತು ಸಂದರ್ಭದಲ್ಲಿ ಬೇರೆ ಜಿಲ್ಲೆಗಳಿಗೆ ಕರೆದುಕೊಂಡು ಹೋಗುತ್ತದೆ ಜೀರೋ ಟ್ರಾಫಿಕ್ ಇಲ್ಲದೇ....ಅಲ್ಲದೇ ಈ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿ ಗಳ ಜೊತೆ ಕೇಳಿದಾಗ ಜೀರೋ ಟ್ರಾಫಿಕ್ ಮಾಡಿ ಹೋಗುವ ಅವಶ್ಯಕತೆ ಇರುವ ತುರ್ತು ಸಂದರ್ಭ ಅಲ್ಲ ...ಆ ಮಗುವಿಗೆ ಬೇಕಾಗುವ ಆ ಸೌಲಭ್ಯದ ಚಿಕಿತ್ಸೆ ಯು ಮಂಗಳೂರಿನ ಲ್ಲಿ ಇಲ್ಲದ ಕಾರಣ ಬೆಂಗಳೂರು ಗೇ ಹೋಗಲು ನಾವು ತಿಳಿಸಿದ್ದೇವೆ..ಇದು ಆಸ್ಪತ್ರೆಯ ಆಡಳಿತಾಧಿಕಾರಿ ಗಳ ಉತ್ತರ...KMCC ಆಂಬ್ಯುಲೆನ್ಸ್ ಚಾಲಕ ಹನೀಫ್ ಎಂಬಾತನು ಅದು ಹೇಗೆ ಜೀರೋ ಟ್ರಾಫಿಕ್ ಆಗಿ ರೋಗಿಯನ್ನು ಸಾಗಿಸಿದ ? ಈ ಬಗ್ಗೆ ಪೊಲೀಸ್ ಇಲಾಖೆ ಅನುಮತಿ ನೀಡಿದೆಯಾ ? ಅಥವಾ ಅನುಮತಿ ನೀಡುವಾಗ ಆಸ್ಪತ್ರೆಯ ವೈದ್ಯರು ಗಳ ಜೂತೆ ಪೊಲೀಸ್ ಇಲಾಖೆ ಮಾತುಕತೆ ಮಾಡಿದೆಯಾ ?