ಕೆಎಂಎಫ್ ಹಾಲಿನ ದರ ಹೆಚ್ಚಳ: ಸಚಿವ ಮಂಜು ಸಮರ್ಥನೆ

ಶುಕ್ರವಾರ, 31 ಮಾರ್ಚ್ 2017 (15:02 IST)
ರೈತರಿಗೆ ಅನುಕೂಲವಾಗಲಿ ಎಂದು ಹಾಲಿನ ದರದಲ್ಲಿ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ ಹಾಸನ ಜಿಲ್ಲಾ ಉಸ್ತುವಾರಿ ಪಶುಸಂಗೋಪನಾ ಖಾತೆ ಸಚಿವ ಎ.ಮಂಜು ಹೇಳಿದ್ದಾರೆ.
 
ಒಂದು ವೇಳೆ, ಗ್ರಾಹಕರಿಗೆ ದರ ಜಾಸ್ತಿಯಾಗುತ್ತದೆ ಎಂದು ಅನ್ನಿಸಿದರೆ, ರೈತರಿಗೆ ಅನುಕೂಲವಾಗುತ್ತದೆ ಎಂದು ಭಾವಿಸಬೇಕಾಗುತ್ತದೆ ಎಂದರು.
 
ಇತರ ಹಾಲುಗಳಿಗೆ ಹೋಲಿಸಿದಲ್ಲಿ ಕೆಎಂಎಫ್ ಹಾಲಿನ ದರ ಕಡಿಮೆಯಿರುವುದರಿಂದ ಗ್ರಾಹಕರಿಗೆ ತೊಂದರೆಯಾಗುವುದಿಲ್ಲ ಎಂದು ಸಚಿವ ಮಂಜು ತಿಳಿಸಿದ್ದಾರೆ. 
 
ಹಾಲು ಉತ್ಪಾದಕ ರೈತರ ಸಂಕಷ್ಟವನ್ನು ಗಮನದಲ್ಲಿರಿಸಿಕೊಂಡು ಸರಕಾರ ಪ್ರತಿ ಲೀಟರ್‌ ಹಾಲಿಗೆ ಎರಡು ರೂಪಾಯಿ ದರ ಹೆಚ್ಚಳ ಮಾಡಲಾಗುತ್ತಿದೆ. ನಾಳೆಯಿಂದ ಹೊಸ ದರ ಜಾರಿಗೆ ಬರಲಿದೆ ಎಂದು ಪಶುಸಂಗೋಪನಾ ಖಾತೆ ಸಚಿವ ಎ.ಮಂಜು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ